ಅಂತರರಾಷ್ಟ್ರೀಯ

ಇನ್‌ಸ್ಟಾದಲ್ಲಿ ಸೋನಿಯಾ ಗಾಂಧಿ ಹವಾ ! ಫಾಲೋ ಮಾಡ್ತಿರೋದು ಯಾರನ್ನ?

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಈಗ ಇನ್‌ಸ್ಟಾಗ್ರಾಮ್‌ಗೆ ಎಂಟ್ರಿ ಕೊಟ್ಟಿದ್ದಾರೆ ! 79ನೇ ವಯಸ್ಸಿನಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಖಾತೆ ತೆರೆದಿರುವ ಸೋನಿಯಾ ಗಾಂಧಿ, ತಮ್ಮ ಮೊದಲ ಪೋಸ್ಟ್‌ನಲ್ಲೇ ಮುಂಬರುವ ಆತ್ಮಕಥೆಯ ಝಲಕ್ ಹಂಚಿಕೊಂಡಿದ್ದಾರೆ. ಇನ್ನು ಅಚ್ಚರಿಯ ವಿಚಾರ ಅಂದ್ರೆ, ಇನ್‌ಸ್ಟಾಗ್ರಾಮ್‌ನಲ್ಲಿ ಸೋನಿಯಾ ಗಾಂಧಿ ಫಾಲೋ ಮಾಡ್ತಿರೋದು ಕೇವಲ ಮೂವರನ್ನಷ್ಟೇ! ಹಾಗಾದ್ರೆ ಆ ಮೂವರು ಯಾರು ? ಸೋನಿಯಾ ಗಾಂಧಿ ಮೊದಲ ಪೋಸ್ಟ್‌ನಲ್ಲಿ ಏನು ಹಂಚಿಕೊಂಡಿದ್ದಾರೆ ? ಇಲ್ಲಿದೆ ಇಂಟರೆಸ್ಟಿಂಗ್ ಮಾಹಿತಿ .

ಇಷ್ಟು ದಿನ ಸಾರ್ವಜನಿಕ ಜೀವನದಲ್ಲಿ ಸಕ್ರಿಯರಾಗಿದ್ದರೂ, ವೈಯಕ್ತಿಕ ಸೋಶಿಯಲ್ ಮೀಡಿಯಾ ಖಾತೆಗಳಿಂದ ದೂರವೇ ಉಳಿದಿದ್ದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಇದೀಗ ಇನ್‌ಸ್ಟಾಗ್ರಾಮ್‌ಗೆ ಪದಾರ್ಪಣೆ ಮಾಡಿದ್ದಾರೆ. ಅಕ್ಟೋಬರ್ 22ರಂದು ತಮ್ಮ ಅಧಿಕೃತ ಖಾತೆಯ ಮೂಲಕ ಮೊದಲ ಪೋಸ್ಟ್ ಹಂಚಿಕೊಂಡಿರುವ ಅವರು, ತಮ್ಮ ಮುಂಬರುವ ಪುಸ್ತಕದ ಮೊದಲ ನೋಟವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. 79ನೇ ವಯಸ್ಸಿನಲ್ಲಿ ಅವರ ಈ ಹೊಸ ಹೆಜ್ಜೆ ಇದೀಗ ರಾಜಕೀಯ ವಲಯದಲ್ಲಿ ಗಮನ ಸೆಳೆದಿದೆ.

ಇನ್ನು ಸೋನಿಯಾ ಗಾಂಧಿ ಅವರ ಇನ್‌ಸ್ಟಾಗ್ರಾಮ್ ಖಾತೆಯಲ್ಲಿನ ವಿಶೇಷ ಸಂಗತಿ ಅಂದ್ರೆ ಅವರು ಫಾಲೋ ಮಾಡುತ್ತಿರುವ ಖಾತೆಗಳು. ಸದ್ಯ ಅವರು ತಮ್ಮ ಮಗ ರಾಹುಲ್ ಗಾಂಧಿ, ಮಗಳು ಪ್ರಿಯಾಂಕಾ ಗಾಂಧಿ ವಾದ್ರಾ ಹಾಗೂ ಕಾಂಗ್ರೆಸ್ ಪಕ್ಷದ ಅಧಿಕೃತ ಇನ್‌ಸ್ಟಾಗ್ರಾಮ್ ಪುಟವನ್ನು ಮಾತ್ರ ಫಾಲೋ ಮಾಡುತ್ತಿದ್ದಾರೆ. ಅಂದರೆ ಕುಟುಂಬ ಮತ್ತು ಪಕ್ಷಕ್ಕೆ ಸೇರಿದ ಈ ಮೂರು ಖಾತೆಗಳೇ ಅವರ ಫಾಲೋಯಿಂಗ್ ಪಟ್ಟಿಯಲ್ಲಿವೆ.

ಇನ್ನು ಸೋನಿಯಾ ಗಾಂಧಿ ತಮ್ಮ ಮೊದಲ ಪೋಸ್ಟ್‌ನಲ್ಲಿ ‘Belonging: A Journey of Love’ ಎಂಬ ಪುಸ್ತಕದ ಪರಿಚಯ ನೀಡಿದ್ದಾರೆ. ಪ್ರೀತಿ, ಕರ್ತವ್ಯ, ನಷ್ಟ ಹಾಗೂ ಬದುಕಿನಲ್ಲಿ ನಮ್ಮದೇ ಆದ ನೆಲೆಯನ್ನು ಕಂಡುಕೊಳ್ಳುವ ಪಯಣದ ಕಥೆ ಇದಾಗಿದೆ ಎಂದು ಅವರು ಬರೆದುಕೊಂಡಿದ್ದಾರೆ. ಮೊದಲ ವಿಡಿಯೋದಲ್ಲಿ ಪುಸ್ತಕದ ಪ್ರತಿಯನ್ನು ಸ್ವೀಕರಿಸಿ, ಅದರ ಪುಟಗಳನ್ನು ತಿರುವಿ ನೋಡುವ ದೃಶ್ಯಗಳಿವೆ. ಮಗಳು ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ಸಿಹಿ ಹಂಚಿಕೊಳ್ಳುವ ಕ್ಷಣವೂ ವಿಡಿಯೋದಲ್ಲಿದೆ .

ಇನ್ನು ಈ ಆತ್ಮಕಥೆ ನವೆಂಬರ್ 10ರಂದು ಬಿಡುಗಡೆಯಾಗಲಿದೆ ಎಂದು ಪ್ರಕಟಿಸಲಾಗಿದೆ. ಸೋನಿಯಾ ಗಾಂಧಿ ಅವರ ಜೀವನದ ವೈಯಕ್ತಿಕ ಅನುಭವಗಳು, ಕುಟುಂಬದ ನೆನಪುಗಳು ಹಾಗೂ ಅವರ ಬದುಕಿನ ಪ್ರಮುಖ ಘಟ್ಟಗಳ ಬಗ್ಗೆ ಈ ಪುಸ್ತಕದಲ್ಲಿ ವಿವರಿಸಲಾಗಿದೆ. ಮೊದಲ ಪೋಸ್ಟ್ ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ ಅವರ ಖಾತೆಗೆ ಒಂದು ಲಕ್ಷಕ್ಕೂ ಅಧಿಕ ಫಾಲೋವರ್ಸ್ ಸೇರ್ಪಡೆಯಾಗಿದ್ದು, ವಿಡಿಯೋ ಕೂಡ ಲಕ್ಷಾಂತರ ಲೈಕ್ಸ್ ಪಡೆದುಕೊಂಡಿದೆ ಎಂದು ವರದಿಯಾಗಿದೆ .

ಒಟ್ಟಿನಲ್ಲಿ, ಇನ್‌ಸ್ಟಾಗ್ರಾಮ್‌ಗೆ ಸೋನಿಯಾ ಗಾಂಧಿ ಅವರ ಎಂಟ್ರಿ ಮತ್ತು ಆತ್ಮಕಥೆಯ ಮೊದಲ ನೋಟ ಇದೀಗ ಸುದ್ದಿಯಾಗಿದೆ. ಫಾಲೋ ಮಾಡುತ್ತಿರುವುದು ಕೇವಲ ಮೂವರನ್ನು ಮಾತ್ರ ಎಂಬ ವಿಚಾರವೂ ಕುತೂಹಲ ಮೂಡಿಸಿದೆ. ರಾಜಕೀಯದಾಚೆಗೆ ತಮ್ಮ ಬದುಕಿನ ಕಥೆಯನ್ನು ನೇರವಾಗಿ ಜನರೊಂದಿಗೆ ಹಂಚಿಕೊಳ್ಳಲು ಸೋನಿಯಾ ಗಾಂಧಿ ಈಗ ಹೊಸ ಡಿಜಿಟಲ್ ವೇದಿಕೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button

You cannot copy content of this page

Adblock Detected

Please consider supporting us by disabling your ad blocker