ರಾಜಕೀಯರಾಜ್ಯ

ಕರ್ನಾಟಕ ರಾಜಕೀಯದಲ್ಲಿ ಹನಿಟ್ರ್ಯಾಪ್ ಸುಂಟರಗಾಳಿ! ಈ ಪ್ರಕರಣಗಳಲ್ಲಿ ಸಿಲುಕಿದ ನಾಯಕರು ಯಾರೆಲ್ಲಾ?

ಸ್ನೇಹಿತರೇ ಎಲ್ಲರಿಗೂ ನಮಸ್ಕಾರ, ವಣಕ್ಕಂ, ಸಲಾಂ ಆಲೈಕುಂ.. ನಾನು ನಿಮ್ಮ ಗಂಟಲ್ ಮ್ಯಾನ್
ಕಳೆದೊಂದು ತಿಂಗಳಿನಿ0ದ ಕರ್ನಾಟಕದ ರಾಜಕೀಯ ಪಡಸಾಲೆಯಲ್ಲಿ ಸ್ಟಿಂಗ್ ಅಪರೇಷನ್ ನೆಪದಲ್ಲಿ ನಡೆದ ಹನಿಟ್ರ್ಯಾಪ್ ನದ್ದೇ ಸದ್ದು.. ಇದಕ್ಕೆ ಬಲಿಯಾಗಿದ್ದು ಮಾತ್ರ ಅಹಿಂದ ನಾಯಕ ಸಿದ್ದರಾಮಯ್ಯ. ಅವರನ್ನು ಕುರ್ಚಿಯಿಂದ ಕೆಳಗಿಳಿಸಲು ಮುಡಾ ಹಗರಣ ಮತ್ತಿತರ ವಿಷಯಗಳನ್ನು ಮುಂದಿಟ್ಟುಕೊ0ಡು ನಾನಾ ಪ್ರಯತ್ನಗಳನ್ನು ಮಾಡಿ ಅದರಲ್ಲಿ ವಿಪಲರಾದಾಗ ಕೊನೆಗೆ ಕಂಡುಕೊ0ಡಿದ್ದೇ ಈ ಸ್ಟಿಂಗ್ ಆಪರೇಷನ್ ಎಂಬ ಕೃತ್ಯ. ಕರ್ನಾಟಕದ ರಾಜಕೀಯ ಅಧ್ಯಾಯದಲ್ಲಿ ಇದೊಂದು ಪರಮ ಅಸಹ್ಯಕರವಾದ ಅಧ್ಯಾಯವಾಗಿ ಉಳಿಯಲಿದೆ. ಸಿದ್ದರಾಮಯ್ಯ ಶುದ್ದರಾಮಯ್ಯನಾಗಿ ಈ ಕಳಂಕದಿ0ದ ಮುಕ್ತರಾದರೂ ತನ್ನನ್ನು ಕುರ್ಚಿಯಿಂದ ಕೆಳಗಿಳಿಸಲು ತನ್ನವರೇ ಇಂತಹ ನಾಟಕವಾಡಿದರೇ ಎಂಬ ಕೊರಗಿನಿಂದ ಆಚೆ ಬರಲು ಸಾಕಷ್ಟು ಸಮಯ ತೆಗೆದುಕೊಳ್ಳಬಹುದು. ಕಾಂಗ್ರೇಸ್ ಪಕ್ಷದ ಈ ಸ್ವಯಂ ಕೃತ ಮೊನ್ನೆ ಮೊನ್ನೆ ನಡೆದ ಎಂಎಲ್‌ಸಿ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಹಿನಾಯವಾಗಿ ಸೋಲುವ ಮೂಲಕ ತಕ್ಕ ಬೆಲೆ ತೆತ್ತಾಗಿದೆ. ಸಧ್ಯಕ್ಕೆ ಈ ಸ್ಟಿಂಗ್ ಆಪರೇಷನ್ ಅಥವಾ ಹನಿಟ್ರ್ಯಾಪ್ ಕುರಿತಂತೆ ನಡೆಯುತ್ತಿರುವ ತನಿಖೆಯ ಬಗ್ಗೆ ಇಲಾಖೆ ಮೇಲೆ ಮುನಿಸಿಕೊಂಡಿರುವ ಸಿದ್ದರಾಮಯ್ಯನವರ ಮುಂದಿನ ನಡೆ ಏನೂ ಎಂಬುದ ಮಾತ್ರ ನಿಗೂಢವಾಗಿದೆ.


ಅಂದ ಹಾಗೆ ಈ ರೀತಿ ಹನಿ ಖೆಡ್ಡಾಗೆ ಬಿದ್ದ ರಾಜಕಾರಣಿಗಳು ರಾಜಕೀಯವಾಗಿ ಏಳಿಗೆಯನ್ನು ಕಂಡಿಲ್ಲ. ಹಾಗಾದರೆ ಅವರು ಯಾರೆಲ್ಲಾ? ಇಲ್ಲಿದೆ ಸಂಪೂರ್ಣ ವಿವರ.

ಸಿದ್ದರಾಮಯ್ಯ ಸಂಪುಟದಲ್ಲಿ ಅಬಕಾರಿ ಸಚಿವರಾಗಿದ್ದ ಎಚ್ ವೈ ಮೇಟಿ ಅವರ ಮೇಲೂ ಹನಿಟ್ರ‍್ಯಾಪ್ ನಡೆದಿತ್ತು. ಲೈಂಗಿಕ ಚಟುವಟಿಕೆಯಲ್ಲಿ ತೊಡಗಿದ್ದ ವಿಡಿಯೋ ವೈರಲ್ ಆಗಿತ್ತು. ಪರಿಣಾಮ ಅವರು 2016, ಡಿಸೆಂಬರ್ 7 ರಂದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಒಂದು ಪ್ರಕರಣ ಅವರ ರಾಜಕೀಯ ಜೀವನದ ಮೇಲೆ ದೊಡ್ಡ ಮಟ್ಟದಲ್ಲಿ ಹಿನ್ನಡೆ ಉಂಟಾಗಿತ್ತು. ಸಿಐಡಿ ಈ ಪ್ರಕರಣದ ತನಿಖೆ ನಡೆಸಿತ್ತು. ವರ್ಗಾವಣೆ ಮಾಡಲು ಮಹಿಳೆಯರನ್ನು ಎಚ್ ವೈ ಮೇಟಿ ಲೈಂಗಿಕವಾಗಿ ಬಳಸಿಕೊಂಡಿದ್ದರು ಎಂಬ ಆರೋಪ ಇತ್ತು. ಆದರೆ ನಂತರದಲ್ಲಿ ಸಿಐಡಿ ಕ್ಲೀನ್ ಚಿಟ್ ಕೊಟ್ಟಿತ್ತು. ಇದು ಅವರ ರಾಜಕೀಯ ಜೀವನದ ಮೇಲೂ ಭಾರೀ ಪ್ರಭಾವ ಬಿದ್ದಿತ್ತು. ರಾಜಕೀಯವಾಗಿಯೂ ಅವರ ತೆರೆಮರೆಗೆ ಸರಿಯಲು ಇದು ಕಾರಣವಾಗಿತು.

ರಮೇಶ್ ಜಾರಕಿಹೊಳಿ ರಾಜಕೀಯಕ್ಕೆ ಕೊಡಲಿ ಪೆಟ್ಟು ಕೊಟ್ಟ ಸಿಡಿ
ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿ ಮಾಡಿದ್ದ ಪ್ರಕರಣ ರಮೇಶ್ ಜಾರಕಿಹೊಳಿ ಪ್ರಕರಣ. ಸಮ್ಮಿಶ್ರ ಸರ್ಕಾರ ಪತನದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರಮೇಶ್ ಜಾರಕಿಹೊಳಿ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ಸಂದರ್ಭದಲ್ಲಿ ಹನಿ ಟ್ರ‍್ಯಾಪ್ ಗೆ ಒಳಗಾಗಿದ್ದರು. ವ್ಯವಸ್ಥಿತವಾಗಿ ಇವರನ್ನು ಖೆಡ್ಡಾಕ್ಕೆ ಕೆಡವಲಾಗಿತ್ತು. ಈ ಪ್ರಕರಣದಲ್ಲಿ ಆರೋಪಿಗಳನ್ನು ಬಂಧನ ಮಾಡಲಾಗಿತ್ತಾದರೂ, ರಮೇಶ್ ಜಾರಕಿಹೊಳಿಯ ರಾಜಕೀಯ ಅಬ್ಬರಕ್ಕೆ ಕೊಡಲಿ ಏಟು ನೀಡಿದೆ. ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ರಮೇಶ್ ಜಾರಕಿಹೊಳಿ ರಾಜಕೀಯವಾಗಿ ಹಿನ್ನಡೆಯನ್ನು ಅನುಭವಿಸಿದ್ದರು. ಇಂದಿಗೂ ಅದರಿಂದ ಹೊರಗೆ ಬರಲು ಅವರಿಂದ ಸಾಧ್ಯವಾಗಿಲ್ಲ. ಇದರ ಹಿಂದೆ ಪ್ರಭಾವಿ ರಾಜಕಾರಣಿಗಳ ಕೈವಾಡ ಇದೆ ಎಂಬ ಆರೋಪವನ್ನು ನಿರಂತವಾಗಿ ರಮೇಶ್ ಮಾಡುತ್ತಾ ಬಂದಿದ್ದಾರೆ.

ಬಾ0ಬೆ ಬಾಯ್ಸ್ ಸಿ.ಡಿ ಸ್ಟೇ !
ಆಪರೇಷನ್ ಕಮಲದ ಮೂಲಕ ಕಾಂಗ್ರೆಸ್ – ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಪತನ ಮಾಡಿದ ಬಾಂಬೆ ಬಾಯ್ಸ್ ಆರ್ಥಾತ್ ಬಂಡಾಯ ಶಾಸಕರ ಅಶ್ಲೀಲ ಸಿ.ಡಿಗಳು ಇವೆ ಎಂಬ ಸುದ್ದಿಯೂ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿತ್ತು. ಮುಂಬೈ ರೆಸಾರ್ಟ್ ನಲ್ಲಿ ತಂಗಿದ್ದ ಶಾಸಕರ ವಿಡಿಯೋಗಳನ್ನು ಮಾಡಲಾಗಿದೆ ಎಂಬ ಮಾತು ಕೇಳಿ ಬಂದಿತ್ತು. ಇದರ ಬೆನ್ನಲ್ಲೇ ಬಹುತೇಕ ಮಂದಿ ನ್ಯಾಯಾಲಯದ ಮೊರೆ ಹೋಗಿ ತಡೆಯಾಜ್ಞೆ ತಂದಿದ್ದರು. ಶಾಸಕರು ನ್ಯಾಯಾಲಯದ ಮೊರೆ ಹೋಗಿ ತಡೆಯಾಜ್ಞೆ ತಂದಿದ್ದು ನಾನಾ ರೀತಿಯ ಅನುಮಾನಕ್ಕೆ ಕಾರಣವಾಗಿತ್ತು. ಹಾಗಿದ್ದರೂ ಬಾಂಬೆ ಬಾಯ್ಸ್ ವಿಡಿಯೋ ಪದೇ ಪದೇ ಸುದ್ದಿಯಲ್ಲಿರುತ್ತಿದೆ.

ರಘುಪತಿ ಭಟ್ ಸಿ.ಡಿ ಪುರಾಣ!


ಉಡುಪಿ ಶಾಸಕರಾಗಿದ್ದ ರಘುಪತಿ ಭಟ್ ಸಿ.ಡಿ ಪ್ರಕರಣ ರಾಜ್ಯಾದ್ಯಂತ ಭಾರೀ ಸದ್ದು ಮಾಡಿತ್ತು. 2012 ರಲ್ಲಿ ಯುವತಿಯೊಬ್ಬಳ ಜೊತೆ ಇದ್ದರೆನ್ನಲಾದ ಹಸಿ ಹಸಿ ದೃಶ್ಯಾವಳಿಗಳು ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿದ್ದವು. ಇದು ಅವರ ರಾಜಕೀಯ ಭವಿಷ್ಯದ ಮೇಲೂ ಕಪ್ಪುಚುಕ್ಕೆಯಾಗಿ ಪರಿಣಮಿಸಿತ್ತು. 2018 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಕೊಡುವಾಗಲೂ ಈ ವಿಚಾರ ಚರ್ಚೆಯ ಮುನ್ನಲೆಗೆ ಬಂದಿತ್ತು. ಆದರೆ ಕೊನೆಯ ಗಳಿಗೆಯಲ್ಲಿ ಟಿಕೆಟ್ ಪಡೆಯುವಲ್ಲಿ ಹಾಗೂ ಗೆಲವು ಸಾಧಿಸುವಲ್ಲಿ ಯಶ್ವಸಿ ಆಗಿದ್ದರು. ಆದರೆ 2023 ರ ವಿಧಾನಸಭೆ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ಕೈತಪ್ಪಿದೆ. ಇದೀಗ ರಾಜಕೀಯವಾಗಿಯೂ ರಘುಪತಿ ಭಟ್ ಅತಂತ್ರರಾಗಿದ್ದಾರೆ.

ಎ0.ಪಿ ರೇಣುಕಾಚಾರ್ಯ ಫೋಟೋ ವೈರಲ್ ಅವಾಂತರ!


ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಅವರು ಮಹಿಳೆಯೊಬ್ಬರ ಜೊತೆಗಿದ್ದ ಫೋಟೋ ರಾಜ್ಯಾದ್ಯಂತ ಸದ್ದು ಮಾಡಿತ್ತು. ಉದ್ದೇಶಪೂರ್ವಕವಾಗಿ ಈ ಫೋಟೋವನ್ನು ಲೀಕ್ ಮಾಡಲಾಗಿತ್ತು. ಇದರಿಂದ ಎಂಪಿ ರೇಣುಕಾಚಾರ್ಯ ಅವರ ರಾಜಕೀಯ ಜೀವನದ ಮೇಲೂ ಪರಿಣಾಮ ಬೀರಿತ್ತು. ಇದೇ ರೀತಿಯಲ್ಲಿ ಮಾಜಿ ಶಾಸಕ ಹರತಾಳು ಹಾಲಪ್ಪ ಅವರ ಅಶ್ಲೀಲ ವಿಡಿಯೋ ಹಾಗೂ ಸಂಬ0ಧಿಸಿದ ಸುದ್ದಿ ಅವರ ರಾಜಕೀಯ ಜೀವನದ ಮೇಲೆ ದೊಡ್ಡ ಹೊಡೆತ ಕೊಟ್ಟಿತ್ತು. ಅದರಿಂದ ಅವರಿಗೆ ಸುಧಾರಿಸಲು ಇಂದಿಗೂ ಸಾಧ್ಯವಾಗಿಲ್ಲ.

ಕೈ ತಪ್ಪಿದ ಸಂಜೀವ ಮಠಂದೂರು ಟಿಕೆಟ್
ಪುತ್ತೂರು ವಿಧಾನಸಭೆ ಕ್ಷೇತ್ರದ ಮಾಜಿ ಶಾಸಕ ಸಂಜೀವ್ ಮಠಂದೂರು ಅವರ ವಿಡಿಯೋ ಕಳೆದ ಚುನಾವಣೆಯ ಸಂದರ್ಭದಲ್ಲಿ ವೈರಲ್ ಆಗಿತ್ತು. ಮಹಿಳೆಯೊಬ್ಬರ ಜೊತೆಗೆ ಅವರು ಕಾಣಿಸಿಕೊಂಡಿದ್ದಾರೆ ಎನ್ನಲಾದ ವಿಡಿಯೋ ಇದಾಗಿತ…

Related Articles

Back to top button

You cannot copy content of this page

Adblock Detected

Please consider supporting us by disabling your ad blocker