ಅಂತರರಾಷ್ಟ್ರೀಯ

ರಷ್ಯಾ ರಾಜಧಾನಿ ಮೇಲೆ ಉಕ್ರೇನ್ ಭೀಕರ ಡ್ರೋನ್‌ ದಾಳಿ – ಓರ್ವ ಭಾರತೀಯ ಸಾ*ವು, ಮೂವರಿಗೆ ಗಂಭೀರ ಗಾಯ!

ಮಾಸ್ಕೋ: ರಷ್ಯಾ ರಾಜಧಾನಿ ಮಾಸ್ಕೋ ನಗರದ ಮೇಲೆ ಉಕ್ರೇನ್ ನಡೆಸಿದ ದಾಳಿಯಲ್ಲಿ ಓರ್ವ ಭಾರತೀಯ ಮೂಲದ ಕಾರ್ಮಿಕ ಸಾ*ವನ್ನಪ್ಪಿದ್ದು, ಮೂವರು ಗಾ*ಯಗೊಂಡಿದ್ದಾರೆ.

ರಷ್ಯಾ-ಉಕ್ರೇನ್‌ ನಡುವಿನ ಸುದೀರ್ಘ ಯುದ್ಧ ಇತ್ತೀಚಿನ ದಿನಗಳಲ್ಲಿ ತೀವ್ರಗೊಂಡಿದ್ದು, ಉಕ್ರೇನ್ ಸೇನೆಯು ರಷ್ಯಾದ ರಾಜಧಾನಿ ಮಾಸ್ಕೋ ಮತ್ತು ಅದರ ಸುತ್ತಮುತ್ತಲಿನ ವಸತಿ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಅತಿ ದೊಡ್ಡ ಜಂಟಿ ಡ್ರೋನ್ ದಾಳಿಯನ್ನು ನಡೆಸಿದೆ.

ಮಾಸ್ಕೋ ಸಮೀಪದ ಖಿಮ್ಕಿ ಮತ್ತು ಮೈತಿಶ್ಚಿ ವಸತಿ ಪ್ರದೇಶಗಳ ಮೇಲೆ ಡ್ರೋನ್ ಅವಶೇಷಗಳು ಬಿದ್ದಿದ್ದು, ತೈಲ ಸಂಸ್ಕರಣಾಗಾರಕ್ಕೂ ಹಾನಿಯಾಗಿದೆ. ಘಟನೆಯಲ್ಲಿ ಒಟ್ಟು ನಾಲ್ಕು ಜನರು ಸಾವನ್ನಪ್ಪಿದ್ದು, 12ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇದರಲ್ಲಿ ಒಬ್ಬ ಭಾರತೀಯ ಕಾರ್ಮಿಕ ಮೃ*ತಪಟ್ಟಿದ್ದು, ಮೂವರು ಭಾರತೀಯರು ಗಾಯಗೊಂಡಿದ್ದಾರೆ.

ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳು ಘಟನಾ ಸ್ಥಳ ಮತ್ತು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಸ್ಥಿತಿಯನ್ನು ಪರಿಶೀಲಿಸಿದ್ದಾರೆ. ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿ, ಗಾ*ಯಗೊಂಡವರಿಗೆ ಅಗತ್ಯ ವೈದ್ಯಕೀಯ ಮತ್ತು ಕಾನೂನು ನೆರವು ನೀಡಲು ಸ್ಥಳೀಯ ಆಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button

You cannot copy content of this page

Adblock Detected

Please consider supporting us by disabling your ad blocker