ಅಂಕಣಗಳುಅಂತರರಾಷ್ಟ್ರೀಯಕ್ರೈಮ್ರಾಜಕೀಯರಾಜ್ಯರಾಷ್ಟ್ರೀಯವಾಣಿಜ್ಯಸಿನಿಮಾ

ನಟಿ ಶೃತಿ ಅಭಿನಯದ 175ನೇ ಸಿನಿಮಾ ‘ಮದರ್’ ಮುಹೂರ್ತ!

ಅಭಿನಯ ಸರಸ್ವತಿ ಶೃತಿ ಅವರ 175ನೇ ಸಿನಿಮಾಗೆ ಇಂದು ಮುಹೂರ್ತ ನೆರವೇರಿದೆ. ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಮದರ್ ನೆರವೇರಿದೆ. ವಿನೋದ್ ಪ್ರಭಾಕರ್ ಅವರು ಮುಹೂರ್ತಕ್ಕೆ ಬಂದು ಶುಭ ಹಾರೈಸಿದ್ದಾರೆ. ನಾಗತಿಹಳ್ಳಿ ಚಂದ್ರಶೇಖರ್ ಕ್ಲಾಪ್ ಮಾಡಿ ಹಾರೈಸಿದ್ದಾರೆ.

ನಿರ್ದೇಶಕ ರಾಕೇಶ್ ಅವರು, ಮದರ್ ತುಂಬಾ ಪವರ್ ಫುಲ್ ಕಥೆ. ಮಂಡ್ಯದ ಅನಕ್ಷರಸ್ಥ ಮಹಿಳೆ ಸಂಸಾರ ಕಾಪಾಡುವುದಕ್ಕೆ ಹೋರಾಟ ಮಾಡುವ ಕಥೆಯೇ ಮದರ್. ಶೃತಿ ಅವರು ಅಳಿಸುವುದಿಲ್ಲ. ಇಲ್ಲಿ ಶೃತಿ ಅವರನ್ನು ಬೇರೆಯದ್ದೇ ರೀತಿಯಲ್ಲಿ ಕಾಣಬಹುದು. ರಗಡ್ ಲುಕ್​ನಲ್ಲಿ ಕಾಣಿಸ್ತಾರೆ. 35 ದಿನಗಳ ಕಾಲ ಶೂಟಿಂಗ್ ಮಾಡಲಾಗುತ್ತೆ, ಮಂಡ್ಯದ ಸುತ್ತ ಮುತ್ತ ನಡೆಯುತ್ತೆ ಎಂದು ಮಾಹಿತಿ ನೀಡಿದ್ರು.

ವಿನೋದ್ ಪ್ರಭಾಕರ್ ಅವರು, ಶೃತಿ ಅಮ್ಮನ್ನ ಅಮ್ಮ ಅಂತಾನೇ ಕರಿತೀನಿ. ಮಾದೇವ ಸಮಯದಲ್ಲಿ ರಾಕಿ ಕಟ್ಟಿದ್ದರು. ಅಕ್ಕನು ಅಮ್ಮನೆ ಅಲ್ವಾ. ಮಾದೇವ ಸೈಲೆಂಟ್ ಆದಾಗೆಲ್ಲಾ ಶೃತಿ ಅಮ್ಮ ವೈಲೆಂಟ್ ಆಗ್ತಾ ಇದ್ದರು. ಅವರು ಸೈಲೆಂಟ್ ಆದಾಗ ನಾನು ವೈಲೆಂಟ್ ಆಗ್ತಿದೆ. ಆ ಕಾಂಬಿನೇಷನ್ ಸಖತ್ ವರ್ಕ್ ಆಗುತ್ತೆ. ನಾನು ಇಲ್ಲಿಗೆ ಬರೋದಕ್ಕೆ ಕಾರಣ ಶೃತಿ ಅಮ್ಮನವರ 175ನೇ ಸಿನಿಮಾ ಅನ್ನೋದಕ್ಕೆ. ಅಷ್ಟು ಸುಲಭವಲ್ಲ 175 ಸಿನಿಮಾ ಮಾಡೋದು ಅಷ್ಟು ಸುಲಭವಲ್ಲ. ಇವರಿಗೆ ರಿಪ್ಲೇಸ್ಮೆಂಟ್ ಅಲ್ವೆ ಅಲ್ಲ ಎಂದು ಶೃತಿ ಅವರ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು‌.

Related Articles

Leave a Reply

Your email address will not be published. Required fields are marked *

Back to top button

You cannot copy content of this page

Adblock Detected

Please consider supporting us by disabling your ad blocker