Mysoreರಾಜ್ಯ

ಸರ್ಕಾರದ ವಿರುದ್ಧ ರಾಜಮಾತೆ ಗರಂ !

ಮೈಸೂರು ದಸರಾ ಅಂದ್ರೆ ಕರ್ನಾಟಕದ ಹೆಮ್ಮೆ. ಕರ್ನಾಟಕದ ಪ್ರತಿಷ್ಠೆ. ಕರ್ನಾಟಕದ ಗೌರವ. ದಸರಾ ಆಚರಣೆಗಾಗಿ ಸರ್ಕಾರ ಕೋಟಿ ಕೋಟಿ ಹಣ ಖರ್ಚು ಮಾಡುತ್ತೆ. ತಿಂಗಳುಗಟ್ಟಲೆ ಸಿದ್ಧತೆ ಮಾಡಿಕೊಳ್ಳುತ್ತೆ. ಆದ್ರೆ, ಈ ಬಾರಿ ಸರ್ಕಾರದ ದಸರಾ ಆಚರಣೆ ವೈಖರಿಗೆ ಮೈಸೂರು ರಾಜ ಮನೆತನ ಅಸಮಾಧಾನ ಹೊರಹಾಕಿದೆ .

ವಿಶ್ವವಿಖ್ಯಾತ ಮೈಸೂರಿನ ದಸರಾ ಮುಗಿದು 5 ದಿನ ಕಳೆದಿವೆ. ಸಣ್ಣಪುಟ್ಟ ಗೊಂದಲ ಹೊರತು ಪಡಿಸಿ ದಸರಾ ಆಚರಣೆ ಸಂಭ್ರಮದಿಂದ ಮುಗಿದಿತ್ತು. ಆದ್ರೆ ಈಗ ಮೈಸೂರು ರಾಜಮನೆತನದ ರಾಜ ವಂಶಸ್ಥೆ ಸರ್ಕಾರಕ್ಕೆ ಪತ್ರ ಬರೆದಿದ್ದು, ಅಸಮಾಧಾನ ಹೊರಹಾಕಿದ್ದಾರೆ. ಜಂಬೂಸವಾರಿ ನಡೆಸಿದ ರೀತಿ, ಪೊಲೀಸರ ನಡವಳಿಕೆ ಬಗ್ಗೆ ಬೇಸರ ಹೊರಹಾಕಿದ್ದಾರೆ. ಈ ಬಗ್ಗೆ ಸರ್ಕಾರಕ್ಕೆ ಸುದೀರ್ಘ ಪತ್ರ ಬರೆದು ಕೆಲ ಸಲಹೆಗಳನ್ನೂ ನೀಡಿದ್ದಾರೆ .

ಚಿನ್ನದ ಅಂಬಾರಿ ನಮ್ಮ ಖಾಸಗಿ ಆಸ್ತಿ ಹೊರತು ಸರ್ಕಾರದ್ದಲ್ಲ, ಪೊಲೀಸ್ ಆಯುಕ್ತರು ನೀಡಿದ ಭರವಸೆ ಮೆರೆಗೆ ಅಂಬಾರಿ ನೀಡಿದ್ದೆ. ಆದ್ರೆ ಆಯುಕ್ತರು‌ ನೀಡಿದ್ದ ಭರವಸೆಯನ್ನ ಉಳಿಸಿಕೊಂಡಿಲ್ಲ. ಅಂಬಾರಿ ಸುತ್ತಲೂ ಅನಧಿಕೃತ ವ್ಯಕ್ತಿಗಳು ಓಡಾಟ ನಡೆಸಿದ್ರು, ಅಂಬಾರಿ ಬಳಿ ಪೊಲೀಸ್ ಸಿಬ್ಬಂದಿ ಹಾಗು ಕುಟುಂಬಸ್ಥರಿದ್ದರು. ಸೆಲ್ಫಿ ತೆಗೆದುಕೊಳ್ಳುವ ನೆಪದಲ್ಲಿ ಅಂಬಾರಿ ಬಳಿ ಸುಳಿದಾಡಿದ್ದಾರೆ. ಅಂಬಾರಿ ಭದ್ರತೆಗೆ ಧಕ್ಕೆ ಉಂಟು ಮಾಡಿರುವುದು ಸರಿಯಲ್ಲ ಎಂದು ರಾಜಮಾತೆ ಆಕ್ರೋಶ ಹೊರಹಾಕಿದ್ದಾರೆ .

ಇನ್ನು, ಅಂಬಾರಿ ಹೊರುವ ಆನೆ ವಿಷಯ ಮುಚ್ಚಿಡಲಾಗಿತ್ತು. ಕಳೆದ 45 ವರ್ಷದಲ್ಲಿ ಮೊದಲ ಬಾರಿಗೆ ಗೌಪ್ಯತೆ ತೋರಿದ್ದರು. ಕೊನೆಯ ಕ್ಷಣದವರೆಗೂ ಯಾವುದೇ ಮಾಹಿತಿ ನೀಡರಲಿಲ್ಲ, ಕಾರ್ಯಕ್ರಮಕ್ಕೆ ಐದು ದಿನ ಇರುವಾಗ ಆನೆ ಬಗ್ಗೆ ತಿಳಿಸಿದ್ರು. ಯಾವ ಆನೆಗೆ ಅಂಬಾರಿ ಹೊರಿಸ್ತೀರಿ ಅಂತ ನಾನೇ ಕೇಳಬೇಕಾಯಿತು, ಡಿಸಿಎಫ್‌ಗೆ ಕೇಳಬೇಕಾದ ಸ್ಥಿತಿ ನಿರ್ಮಿಸಿದ್ದು ಅಸಮಾಧಾನ ತಂದಿದೆ. ನಮ್ಮ ಸಹಕಾರವನ್ನೇ ಸಾಮಾನ್ಯ ಸಂಗತಿ ಅಂತ ಪರಿಗಣಿಸಿದ್ದೀರಿ ಎಂದು ರಾಜಮಾತೆ ಪ್ರಮೋದಾದೇವಿ ಅಸಮಾಧಾನ ಹೊರಹಾಕಿದ್ರು .

ವಿಜಯದಶಮಿಯಂದು ಜಂಬೂಸವಾರಿ ಮೆರವಣಿಗೆ ಬೇಡ ಎಂದು ಸರ್ಕಾರಕ್ಕೆ ರಾಜಮಾತೆ ಪ್ರಮೋದಾದೇವಿ ಅವರು ಸಲಹೆ ನೀಡಿದ್ದಾರೆ. ಚಾಮುಂಡೇಶ್ವರಿ ರಥೋತ್ಸವದಂದು ಜಂಬೂಸವಾರಿ ಮೆರವಣಿಗೆ ನಡೆಸಿ. ವಿಜಯ ದಶಮಿಯಂದು ಅಂಬಾರಿ ಮೆರವಣಿಗೆ ಮಾಡೋದರಿಂದ ಅರಮನೆ ಧಾರ್ಮಿಕ ಕಾರ್ಯಕ್ರಮಗಳಿಗೆ ಅಡ್ಡಿಯಾಗ್ತಿದೆ. ಇದು ಖಂಡಿತವಾಗಿ ಸ್ವೀಕಾರಾರ್ಹವಲ್ಲ. ನಾಡದೇವತೆಗೆ ಸೂಕ್ತ ಗೌರವಗಳೊಂದಿಗೆ ರಥೋತ್ಸವದ ದಿನ ಅಂಬಾರಿ ಮೆರವಣಿಗೆ ಮಾಡಿ. ಅರಮನೆ ಧಾರ್ಮಿಕ ಆಚರಣೆಗೆ ಹಲವು ಅಡ್ಡಿ ಬೆನ್ನಲ್ಲೆ ಸರ್ಕಾರಕ್ಕೆ ರಾಜಮಾತೆ ಖಡಕ್ ಸಂದೇಶ ರವಾನಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button

You cannot copy content of this page

Adblock Detected

Please consider supporting us by disabling your ad blocker