
MYSURU : ಮೈಸೂರು ದಸರಾ ಅಂದರೆ ವೈಭವ, ಸಂಪ್ರದಾಯ ಮತ್ತು ಕಲಾ ಸೌಂದರ್ಯದ ಸಂಗಮ. ಈ ಬಾರಿಯ ದಸರಾ ವಿಶೇಷ ಕೇಕ್ ಪ್ರದರ್ಶನದಲ್ಲಿ, ಪ್ರಯಾಣಿಕರ ಜೀವ ಉಳಿಸಿದ ಕೆಚ್ಚೆದೆಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಸಾಹಸಕ್ಕೆ ವಿಶಿಷ್ಟ ಗೌರವ ಸಲ್ಲಿಸಲಾಗಿದೆ.
ವಿಶ್ವವಿಖ್ಯಾತ ಮೈಸೂರು ದಸರಾ 2026ರ ವಿಶೇಷ ಕೇಕ್ ಪ್ರದರ್ಶನದಲ್ಲಿ ಗಮನ ಸೆಳೆಯುತ್ತಿರುವುದು ಧೈರ್ಯಶಾಲಿ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಕೇಕ್ ಕಲಾಕೃತಿ!ಫ್ಲೈದುಬೈ ವಿಮಾನದಲ್ಲಿ ಪ್ರಯಾಣಿಕರ ಜೀವ ರಕ್ಷಿಸಿದ ಅವರ ಸಾಹಸವನ್ನು ಸ್ಮರಿಸುವ ಉದ್ದೇಶದಿಂದ, ಕೇಕ್ ಮೂಲಕವೇ ಗೌರವ ಸಲ್ಲಿಸಲಾಗಿದೆ.
ಇದರ ಜೊತೆಗೆ, ಮೈಸೂರಿನ ಐತಿಹಾಸಿಕ ಜಗನ್ಮೋಹನ ಅರಮನೆಯ ವೈಭವ ಹಾಗೂ ಮಹಾರಾಣಿ ಕೆಂಪನಂಜಮ್ಮಣ್ಣಿ ಅವರ ಕೊಡುಗೆಯನ್ನು ಬಿಂಬಿಸುವ ಆಕರ್ಷಕ ಕೇಕ್ ಕಲಾಕೃತಿಗಳು ಕೂಡ ಪ್ರದರ್ಶನದ ಮೆರುಗನ್ನು ಹೆಚ್ಚಿಸಿವೆ.
ಕೇವಲ ಸಿಹಿ ತಿನಿಸುಗಳಲ್ಲ, ಇತಿಹಾಸ, ಪರಂಪರೆ ಮತ್ತು ಸಾಹಸದ ಕಥೆಗಳನ್ನು ಸಾರುವ ಕಲಾಕೃತಿಗಳಾಗಿ ಈ ಕೇಕ್‌ಗಳು ನೋಡುಗರ ಗಮನ ಸೆಳೆಯುತ್ತಿವೆ. ಒಂದೆಡೆ ಮೈಸೂರಿನ ರಾಜವೈಭವದ ಅನಾವರಣ, ಮತ್ತೊಂದೆಡೆ ಮಾನವೀಯತೆ ಮತ್ತು ಧೈರ್ಯದ ಪ್ರತೀಕವಾದ ಪೈಲಟ್ ಸ್ಮಿತ್ ಅವರ ಸಾಹಸಕ್ಕೆ ಗೌರವ. ಈ ಮೂಲಕ ಮೈಸೂರು ದಸರಾ ಕೇಕ್ ಪ್ರದರ್ಶನ ವಿಶೇಷ ಆಕರ್ಷಣೆಯಾಗಿ ಮೂಡಿಬಂದಿದೆ
ಒಟ್ಟಿನಲ್ಲಿ, ಕೇಕ್‌ನಲ್ಲೂ ಅರಳಿದ ಇತಿಹಾಸ, ಕಲೆಯಲ್ಲೂ ಮೆರೆದ ಸಾಹಸ ! ಮೈಸೂರು ದಸರಾ 2026ರ ಈ ವಿನೂತನ ಪ್ರಯತ್ನ ಎಲ್ಲರ ಗಮನ ಸೆಳೆಯುತ್ತಿದೆ.




One Comment