ಇದು ಕ್ಯಾಬ್, ಬೆಡ್‌ರೂಮ್ ಅಲ್ಲ!” – ಕಾರಿನಲ್ಲೇ ಹದ್ದುಮೀರಿದ ಜೋಡಿಗೆ ಕ್ಲಾಸ್ ತಗೆದುಕೊಂಡ ಕ್ಯಾಬ್ ಚಾಲಕ!
ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ನೂರಾರು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಆದರೆ ಇಲ್ಲೊಂದು ವಿಡಿಯೋ ನೆಟ್ಟಿಗರ ಗಮನ ಸೆಳೆದಿದ್ದು, ಭಾರಿ ಸದ್ದು ಮಾಡುತ್ತಿದೆ.

ಕ್ಯಾಬ್‌ನಲ್ಲಿ ಪ್ರಯಾಣಿಸುತ್ತಿದ್ದ ಪ್ರೇಮಿಗಳ ಜೋಡಿಯೊಂದು ಸಾರ್ವಜನಿಕ ಸ್ಥಳ ಎಂಬ ಅರಿವಿಲ್ಲದೆ ಹದ್ದುಮೀರಿ ವರ್ತಿಸಲು ಶುರು ಮಾಡಿದೆ. ಇದನ್ನು ಗಮನಿಸಿದ ಕ್ಯಾಬ್ ಚಾಲಕ, ಕೊನೆಗೆ ತಾಳ್ಮೆ ಕಳೆದುಕೊಂಡು ಹೇಳಿದ ಮಾತು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
”ಇದು OYO ರೂಂ ಅಲ್ಲ… ಕ್ಯಾಬ್…!”
ಹಿಂಭಾಗದ ಸೀಟಿನಲ್ಲಿ ಜೋಡಿಯ ಚೇಷ್ಟೆ ಮಿತಿಮೀರುತ್ತಿದ್ದಂತೆ ಕಾರು ನಿಲ್ಲಿಸಿದ ಚಾಲಕ:
”ಸರ್… OYO ಅಥವಾ ಯಾವುದಾದರೂ ಹೋಟೆಲ್ ರೂಮ್ ತಗೊಳ್ಳಿ. ಇದು ಪ್ರಯಾಣ ಮಾಡುವ ಕ್ಯಾಬ್, ನಿಮ್ಮ ಬೆಡ್‌ರೂಮ್ ಅಲ್ಲ!”
ಅಂತ ನೇರವಾಗಿಯೇ ಖಾರವಾಗಿ ಬುದ್ಧಿ ಹೇಳಿದ್ದಾನೆ. ಚಾಲಕನ ಈ ದಿಢೀರ್ ಮಾತಿನಿಂದ ಆ ಜೋಡಿ ಸಂಪೂರ್ಣವಾಗಿ ಶಾಕ್ ಆಗಿದೆ.
ಸಾರ್ವಜನಿಕ ಸ್ಥಳಗಳು ಹಾಗೂ ಬಾಡಿಗೆ ವಾಹನಗಳಲ್ಲಿ ಪ್ರತಿಯೊಬ್ಬರಿಗೂ ಸಭ್ಯತೆ ಇರಬೇಕು ಎಂಬುದನ್ನು ಚಾಲಕ ಜಾಣತನದಿಂದ ನೆನಪಿಸಿದ ರೀತಿ ಈಗ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.



