ಕ್ರೈಮ್

ಹೆಂಡತಿಯ ಶೀಲ ಶ*ಕಿಸಿ ಬರ್ಬರ ಕೊ*

ಹಾಸನ: ಹೆಂಡತಿಯ ಶೀಲ ಶ*ಕಿಸಿ, ಆಕೆಯ ಮೇಲೆ ಸದಾ ಕ್ರೌ*ರ್ಯ ಮೆರೆಯುತ್ತಿದ್ದ ಪತಿಯೊಬ್ಬ ಕೊನೆಗೂ ಆಕೆಯನ್ನು ಬರ್ಬರವಾಗಿ ಕೊ* ಮಾಡಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನಲ್ಲಿ ನಡೆದಿದೆ.

​ಹುಲ್ಲೇನಹಳ್ಳಿ ಗ್ರಾಮದ ಯಶೋಧ (23) ಕೊ*ಯಾದ ದುರ್ದೈ*ವಿ. ಪತ್ನಿಯನ್ನೇ ಕಟುಕನಂತೆ ಕೊ*ದ ಪಾಪಿ ಪತಿ ಪುನೀತ್ (28) ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ.

​ಓದುತ್ತಿರುವಾಗಲೇ ಅರಳಿದ್ದ ಪ್ರೇಮ; ದುರ*ತ ಅಂತ್ಯ

​ಕಳೆದ ಏಳು ವರ್ಷಗಳ ಹಿಂದೆ ಯಶೋಧ ಅವರು ಇನ್ನೂ ಕಾಲೇಜಿನಲ್ಲಿ ಓದುತ್ತಿದ್ದಾಗ, ಪುನೀತ್‌ನೊಂದಿಗೆ ಪರಿಚಯವಾಗಿ ಅದು ಪ್ರೀತಿಯಾಗಿ ಬದಲಾಗಿತ್ತು. ಇಬ್ಬರೂ ಪರಸ್ಪರ ಪ್ರೀತಿಸಿ, ಮನೆಯವರ ಸಮ್ಮತಿಯೊಂದಿಗೆ ಪ್ರೇಮ ವಿವಾಹವಾಗಿದ್ದರು. ಆರಂಭದಲ್ಲಿ ಚೆನ್ನಾಗಿಯೇ ಇದ್ದ ಸಂಸಾರದಲ್ಲಿ ನಂತರದ ದಿನಗಳಲ್ಲಿ ಬಿರುಗಾಳಿ ಎದ್ದಿದೆ.

​ಅನುಮಾನದ ಪಿಶಾಚಿಗೆ ಬ*ಯಾದ ಹೆಣ್ಣು ಜೀವ

​ಮದುವೆಯಾದ ಕೆಲವೇ ವರ್ಷಗಳಲ್ಲಿ ಪುನೀತ್ ಪತ್ನಿಯ ಶೀಲದ ಮೇಲೆ ಸಂಶಯ ಪಡಲು ಆರಂಭಿಸಿದ್ದ. ಇದೇ ವಿಚಾರವಾಗಿ ಯಶೋಧ ಅವರ ಮೇಲೆ ದೈಹಿಕ ಹಾಗೂ ಮಾನಸಿಕವಾಗಿ ತೀವ್ರ ಕಿರುಕು*ಳ ನೀಡುತ್ತಿದ್ದ ಎನ್ನಲಾಗಿದೆ. ಪತಿಯ ಈ ಕ್ರೌ*ರ್ಯ ಮತ್ತು ತನಗಾಗುತ್ತಿದ್ದ ನೋವನ್ನು ಯಶೋಧ ಅವರು ತಮ್ಮ ತಾಯಿ ಮತ್ತು ಸಹೋದರಿಯರ ಬಳಿ ಹಲವು ಬಾರಿ ಹೇಳಿಕೊಂಡು ಕಣ್ಣೀರು ಹಾಕಿದ್ದರು.

ಘಟನೆಯ ಹಿನ್ನೆಲೆ:ನಿನ್ನೆಯೂ ಸಹ ಇದೇ ಶೀಲ ಶ*ಕಿಸುವ ವಿಷಯವಾಗಿ ಇಬ್ಬರ ನಡುವೆ ಜೋರಾಗಿ ಜಗಳ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿದಾಗ ತಾಳ್ಮೆ ಕಳೆದುಕೊಂಡ ಪುನೀತ್, ಯಶೋಧ ಅವರ ಮೇಲೆ ಮನಬಂದಂತೆ ಹ* ನಡೆಸಿ, ಕ್ರೂ*ವಾಗಿ ಹ* ಮಾಡಿದ್ದಾನೆ.

​ಪೊಲೀಸ್ ತನಿಖೆ: ಘಟನೆಗೆ ಸಂಬಂಧಿಸಿದಂತೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಹಳೇಬೀಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಪತಿಯನ್ನು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ಪ್ರೀತಿಯಿಂದ ಕೈಹಿಡಿದ ಪತಿಯೇ ಸಂಶಯದ ಬೆನ್ನೇರಿ ಹೆಂಡತಿಯನ್ನು ಕೊ*ದಿರುವ ಘಟನೆ ಸ್ಥಳೀಯವಾಗಿ ತೀವ್ರ ಆಕ್ರೋ*ಶಕ್ಕೆ ಕಾರಣವಾಗಿದೆ.

Related Articles

Leave a Reply

Your email address will not be published. Required fields are marked *

Back to top button

You cannot copy content of this page

Adblock Detected

Please consider supporting us by disabling your ad blocker