ನಿಮ್ಮ ಗೆಲುವಿಗೆ ನನ್ನ ಜೀವನದ ಶ್ರಮದಕಥೆ ಸ್ಪೂರ್ಥಿಯಾಗಲಿ ಎಂಬ ಆಶಯ: ಜಗ್ಗೇಶ್.

ಯವ್ವನದ ದಿನದಲ್ಲಿ ನನಗೆ ಯಾರು ಸಹಾಯ ಮಾಡಲಿಲ್ಲಾ ಕೋಪ!
ಎಲ್ಲರಿಗು ಇಷ್ಟಪಟ್ಟ ವಸ್ತು ಕೊಡಿಸೋ ತಂದೆತಾಯಿ ನನಗೇಕಿಲ್ಲಾ ಕೋಪ!
ಸ್ನೇಹಿತರ ಜೊತೆ ವಾರಕ್ಕೊಂದು ಸಿನಿಮ ಹೋಟಲ್ ದೋಸೆಗೆ ಕಾಸುಕೊಡಲ್ಲಾ ಅಪ್ಪ ಕೋಪ!
ಕಾಲೇಜಿಗೆ ಒಳ್ಳೆ ಬಟ್ಟೆ ಶೋ ಧರಿಸಿ ಸೈಕಲ್ ನಲ್ಲಿ ಹೋಗಬೇಕು ಅಪ್ಪ ಕ್ಯಾರೆ ಅನ್ನನು ಕೋಪ!

ಈ ಮುಖಕ್ಕೆ ಒಬ್ಬಳು ಪ್ರೇಮಿ ಸಿಕ್ಕಳು ಚಾಕ್ಲೇಟ್ ಕೊಡಿಸಲು ಕಾಸಿಲ್ಲಾ ಕೋಪ!
ನನ್ನ ಇಷ್ಟದ ಕ್ಷೇತ್ರ ಕಲಾರಂಗದಲ್ಲಿ ನನ್ನ ನೋಡಿದರೆ ಎಲ್ಲರಿಗು ವಾಕರಿಕೆ ಓಡಿಸುತ್ತದ್ದರು ಹೊರಗೆ ಕೋಪ!
ಹೈಲ್ಯಾಂಡ್ ಹೋಟೆಲ್ ಪುಟ್ಪಾತ್ ನಲ್ಲಿ ನಿಂತು ಬರುವ ತಾರೆಗಳ ನೋಡಿ ನನಗೇಕಿಲ್ಲಾ ಈ ಯೋಗ ಕೋಪ!
ಬೆಳಗಿನಿಂದ ಸಂಜೆಯವರೆಗು ಗಾಂಧಿನಗರ ಪಾತ್ರಕ್ಕೆ ಅಲೆದಾಟ ಹಸಿವು ಊಟವಿಲ್ಲದೆ ಕೋಪ!
ನನಗೆ ಅಂತ ಯಾರಿಲ್ಲವೆ ಎಂದು ಬಂದ ಕೋಪಕ್ಕೆ ಸಾಂತ್ವನ ಹೇಳಿ ಹುರಿದುಂಬಿಸಿ ಭುಜತಟ್ಟಿ ಏಳು ಎದ್ದೇಳು ನಿನಗೆ ನಾನು ಜನ್ಮ ನೀಡಿದ್ದೆ ಗೆಲ್ಲಲು,ಗದ್ದು ವಂಶಕ್ಕೆ ಕಳಶಪ್ರಾಯವಾಗಲು ಮಗನೆ…
ನೀನು ಗೆಲ್ಲಬೇಕೆಂದರೆ ನಿನ್ನ ನೀನು ಸೈನಿಕನಂತೆ ತಯಾರು ಮಾಡಿಕೋ, ಮಾಡುವ ಕಾಯಕ ಅಭ್ಯಾಸ ಮಾಡಿಕೋ, ಅರ್ಜುನ ಕೃಷ್ಣನ ಜೊತೆಯಲ್ಲಿ ಇಟ್ಟುಕೊಂಡಂತೆ ಭಕ್ತಿ ರೂಡಿಸಿಕೋ, ಅಣಕ ಅಪಮಾನ ಮಾಡುವವರ ಗಮನಿಸದೆ ನಿನ್ನ ಗುರಿಯ ಕಡೆ ಹೆಜ್ಜೆಹಾಕು ಸಾಧಕನಾಗುವೆ, ಒಂದು ನೆನಪಿಡು ಗೆದ್ದರೆ ಮಾತ್ರ ಸನ್ಮಾನ ಸೋತರೆ ಅಪಮಾನ ಎಂದು ಬದುಕಿನ ಯುದ್ಧಕ್ಕೆ ತಯಾರು ಮಾಡಿಬಿಟ್ಟಳು ಅಮ್ಮ ನನ್ನ ದೇವರು,
ಮುಂದೆ ಅವಳು ಹೇಳಿದಂತೆ ಬದುಕು ಸಾಧಿಸಿ ಗೆದ್ದೆ ಅದನ್ನು ನೋಡಲು ಅಮ್ಮನೆ ಇಲ್ಲಾ ನನ್ನ 30ನೆ ವಯಸ್ಸಿಗೆ ಯಾತ್ರೆ ಮುಗಿಸಿ ನನ್ನ ಮುಂದಿನ ಗೋಡೆಯ ಮೇಲೆ ಶಾಶ್ವತ ಚಿತ್ರವಾದಳು…
ಯುವ ಮನಸುಗಳೆ ಯಾವುದೆ ಆಗಲು ಈ ಜಗದಲ್ಲಿ ಅವರವರ ಧರ್ಮದ ದೇವರ ಮೇಲಿನ ಭಕ್ತಿ,ತಾಳ್ಮೆ,ಶ್ರಮ,ಸಮಯಪ್ರಙ್ನೆ,
ನಿರಂತರ ಅಭ್ಯಾಸ, ಉತ್ತಮ ಜನರ ಒಡನಾಟ ಅಭ್ಯಾಸ ಮಾಡಿಕೊಳ್ಳಬೇಕು..
ಯಾವುದೆ ಸಾಧನೆ ಒಂದೆ ದಿನ ಆಗದು
ಕಾದವ ಮೇಧಾವಿ ನುಗ್ಗಿದವ ಮೂರ್ಖ..!!



