ಅಂಕಣಗಳು

ಯಾರು ಈ ಭರತ್ ಭೂಷಣ್ ತಿವಾರಿ..!?

ಕೋವಿಡ್ ಸಂದರ್ಭದಲ್ಲಿ ಬಿಹಾರದ ಒಬ್ಬ ಹುಡುಗ ಮುನ್ನಲೆಗೆ ಬಂದಿದ್ದ.. ಹೆಸರು ಭರತ್ ಭೂಷಣ್ ತಿವಾರಿ.. ಬಿಎಸ್ಸಿ ಪದವೀಧರ.. ಬಿಹಾರದಲ್ಲಿ ಪದವಿ ಅಂದರೆ ಸಣ್ಣದೇನಲ್ಲ ಬಿಡಿ.. ಅವ ಪ್ರಧಾನಿಗೆ ಬರೆದ ಪತ್ರದಲ್ಲಿ ತನ್ನ ದೇಹವನ್ನು ಕೋವಿಡ್ ವಿರುದ್ಧ ತಯಾರಿಸುವ ವ್ಯಾಕ್ಸಿನ್‌ಗೆ ಬಳಸಿಕೊಳ್ಳಿ ಅಂತ ಬರೆದಿದ್ದ… ಅವನ ಹೆಸರನ್ನು ನಂತರ ಕೇಳ್ತಿರೋದು ಒಂದೆರಡು ದಿನದ ಹಿಂದೆ ಆತ ಎನ್‌ಕೌಂಟರಾದಾಗ….

ಬಿಹಾರದ ” ಜಮನಿಯಾ ” ಎನ್ನುವ ಹಳ್ಳಿ ಪ್ರವಾಹದಿಂದ ಕೊಚ್ಚಿ ಹೋಗುತ್ತದೆ.. ಜನ ನಿರ್ಗತಿಕರಾಗುತ್ತಾರೆ… ಪರಿಹಾರವಾಗಿ ಎಷ್ಟೇ ಫಂಡ್ ಬಂದರೂ ಅಧಿಕಾರಿಗಳೇ ಅದನ್ನು ನುಂಗಿ ಹಾಕ್ತಾರೆ… ಜನರ ಪರ ನಿಂತ ಭರತ್ ತಿವಾರಿಗೆ ಹುಚ್ಚ ಎಂಬ ಪಟ್ಟ ಕಟ್ಟಲಾಗುತ್ತೆ.. ಆತ ಭ್ರಷ್ಟಾಚಾರದ ವಿರುದ್ಧ ಬರೆದ ಫೇಸ್ಬುಕ್ ಪೋಸ್ಟ್ ಒಂದಕ್ಕೆ ಪೋಲೀಸರು ಕೇಸ್ ಹಾಕುತ್ತಾರೆ.. ಬಿಹಾರ ದಕ್ಷಿಣ ಭಾರತದಂತೆ ಅಲ್ಲ.. ಶಾಂತಿಯ ಮಾರ್ಗದಲ್ಲಿ ಜಯ ಸಿಗದಿದ್ದರೆ ಕೂಡಲೇ ಜನ ಕ್ರಾಂತಿಯ ದಾರಿ ಹಿಡಿದೇ ಹಿಡಿತಾರೆ.. ಅಲ್ಲಿ ವೆಪನ್‌ಗಳೂ ಅಷ್ಟೇ.. ಸುಲಭವಾಗಿ ಸಿಗುತ್ತವೆ.. ಪೆನ್ನು ಪೇಪರ್ ಹಿಡಿದಿದ್ದ ಭರತ್ ಗನ್ ಹಿಡಿದು ಜನರ ಪರ ನಿಂತ… ಪೆನ್ನು‌ ಪೇಪರಿಂದ ಆಗದ ಜನಸಾಮಾನ್ಯರ ಕೆಲಸ ಗನ್‌ನಿಂದ ನಡೆಯಲಾರಂಬಿಸಿತು.. ಭರತ್ ಯಾರಿಗೂ ಕೇರೇ ಎನ್ನಲಿಲ್ಲ… ಫೇಸ್ಬುಕ್ ಲೈವ್ ಮಾಡೋದು ಅಧಿಕಾರಿಗಳಿಗೆ ಗನ್ ತೋರಿಸಿ ಕೆಲಸ ಮಾಡಿಸೋದು ಮಾಡಲಾರಂಬಿಸಿದ.. ಇದು ಸರಿ ತಪ್ಪು ಅಂತ ಹೇಳೋಕಾಗಲ್ಲ. ಹೇಳಿಕೇಳಿ ಅದು ಬಿಹಾರ.. ಅಲ್ಲಿ ಜಾಣರಿಲ್ಲ‌ ಅಲ್ಲಿ ಮಾತಿನ ಪೆಟ್ಟು ಕೆಲಸ ಮಾಡದು.. ಕೋಣನಿಗೆ ದೊಣ್ಣೆಯ ಪೆಟ್ಟೇ ಬೇಕಾಗಿರೋದು.. ಇದೇ ರೀತಿ ನಡೆಯುತ್ತಿತ್ತು.. ಭ್ರಷ್ಟರಿಗೆ , ಕೆಲಸ ಮಾಡದ ಅಧಿಕಾರಿಗಳಿಗೆ ಸಿಂಹಸ್ವಪ್ನರಾದರು ಭರತ್ ಮತ್ತವನ ಮಿತ್ರರು.. ಜನಬೆಂಬಲ ಸಾಗರೋಪಾದಿಯಲ್ಲಿ ಸಿಕ್ಕಿತು. ಮೊನ್ನೆ ಭರತ್‌‌‌‌ನನ್ನು ಸುತ್ತುವರೆದ ಪೋಲೀಸರಿಗೆ ಆತ ಮೊಬೈಲ್ ಮತ್ತು ಗನ್ ತೋರಿಸಿ ನಿಂತ.. ಮೊಬೈಲ್ ಏಕೆಂದರೆ ಫೇಸ್ಬುಕ್ ಲೈವ್ ಒಂದು ಉತ್ತಮ ಅಸ್ತ್ರ ಎಂಬುದನ್ನಾತ ಅರಿತಿದ್ದ.. ಮಾತುಕತೆ ನಡೆದು ಫೇಸ್ಬುಕ್ ಲೈವ್‌ನಲ್ಲಿಯೇ ಪೋಲೀಸರತ್ತ ಪಿಸ್ತೂಲು ಎಸೆದು ಶರಣಾಗ್ತಾನೆ.. ಆತನನ್ನು ಕೊಂಡೊಯ್ದ ಪೋಲೀಸರು ನಮ್ಮ ಮೇಲೆ ಫಯರ್ ಮಾಡಿದ , ತಪ್ಪಿಸಿಕೊಳ್ಳಲು ಯತ್ನಿಸಿದ ಅಂತ ಎನ್‌ಕೌಂಟರ್ ಮಾಡಿದ್ದಾರೆ.. ಇನ್ನೇನು ಸಾಯುತ್ತಾನೆ ಎನ್ನುವಾಗ ಆಸ್ಪತ್ರೆಗೆ ಸಾಗಿಸಿದ್ದಾರೆ… ಆಸ್ಪತ್ರೆಯಲ್ಲಾತ ಇಹಲೋಕದ ಪಯಣ ಮುಗಿಸಿದ್ದಾನೆ.. ಆತನ ಊರು ಹೊತ್ತಿ ಉರಿಯುತ್ತಿದೆ.. ಅವನು ಕೊಲೆ ಸುಲಿಗೆ ಮಾಡಿಲ್ಲ ಮತ್ತು ಶರಣಾದವನನ್ನು ಮುಗಿಸುವ ಅಧಿಕಾರ ಪೋಲೀಸರಿಗಿಲ್ಲ.. ಆತನ ಅಂತಿಮ ಯಾತ್ರೆಯಲ್ಲಿ ಸೇರಿದ ಜನಸಾಗರ ಹೇಳುತ್ತದೆ ಆತ ಎಂತವನು ಅಂತ.. ಬಿಹಾರದ ಜನ ದಂಗೆಯೆದ್ದಿದ್ದಾರೆ.. ಪೋಲೀಸ್ ವಾಹನಗಳು ಕಂಡ ಕೂಡಲೇ ಪುಡಿಗೈಯುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಉತ್ತರದ ಜನ ಭರತ್ ತಿವಾರಿಯನ್ನು ಭಗತ್ ಸಿಂಗ್‌ಗೆ ಹೋಲಿಸಿ ಬರೆಯುತ್ತಿದ್ದಾರೆ.

ಇಂಕ್ವಿಲಾಬ್ ಜಿಂದಾಬಾದ್… ಭರತ್ ತಿವಾರಿ ಅಮರ್ ರಹೇ.

ಲೇಖಕರು: ರಾಜೇಶ್ ಕುಮಾರ್ ಕಲ್ಯ

Related Articles

Leave a Reply

Your email address will not be published. Required fields are marked *

Back to top button

You cannot copy content of this page

Adblock Detected

Please consider supporting us by disabling your ad blocker