ಪುಷ್ಪವಾನ್ ಪ್ರಜಾವಾನ್ ಪಶುಮಾನ್ ಭವತಿ

ಲೇಖಕರು: ಸದ್ಯೋಜಾತ ಭಟ್
ಸೂರ್ಯನಿಂದ ಆಕಾಶ, ವಾಯು, ಅಗ್ನಿ, ನೀರು ಮತ್ತು ಭೂಮಿಗಳೇ ಈ ಜಗತ್ತಿನ ಪಂಚಭೂತಗಳು. ಅಂದರೆ, ಈ ಭೂಮಿಯಲ್ಲಿ ಸೂರ್ಯನ ಪ್ರಕಾಶ, ಶಾಖ ಬೇಕು. ವಾಯುವಿನ ಪ್ರಸರಣವೂ ಬೇಕು. ಅಗ್ನಿ ಅಂದರೆ ಇಲ್ಲಿ ಅದೊಂದು ಸುಡುವ ಗುಣವುಳ್ಳದ್ದು ಅನ್ನುವುದಕ್ಕಿಂತ ಅದೊಂದು ಶಕ್ತಿ. ಮತ್ತು ಈ ಬ್ರಹ್ಮಾಂಡ ರಚನೆಯಾಗಿದ್ದೇ ನೀರಿನಿಂದ ಎನ್ನುವಾಗ ಇಲ್ಲಿನ ಪ್ರತಿಯೊಂದು ಜೀವಿಗೂ ನೀರು ಅವಶ್ಯವೇ. ಹೀಗೆ ಪಂಚಭೂತಗಳಿಲ್ಲದ ಜಗತ್ತನ್ನು ಕಲ್ಪಿಸಿಕೊಳ್ಳುವುದೂ ಅಸಾಧ್ಯ. ಇದರಲ್ಲಿ ಒಂದರೊಳಗೇ ಇನ್ನೊಂದು ಅಡಗಿದೆ; ಆದರೆ, ನಮ್ಮ ಸೀಮಿತ ಜ್ಞಾನಕ್ಕೆ ಇದು ಗೊತ್ತಾಗುವುದಿಲ್ಲ !
ಆಕಾಶವನ್ನೇ ಸರೋವರದ ನೀರೆಂದುಕೊಂಡರೆ ಅಲ್ಲಿರುವ ಶೀತಲ ಚಂದ್ರನೇ ಆ ನೀರಿನಲ್ಲಿ ಅರಳಿದ ಹೂವು; ಚಂದ್ರನೆಂಬ ಹೂವೊಳಗಿನ ಮಕರಂದವನ್ನು ಅಂದರೆ ಶಕ್ತಿಯನ್ನು ಅರಿತರೆ, ಮನುಷ್ಯನಿಗೆ ಹೆಂಡತಿ, ಮಕ್ಕಳು, ಬೇಕಾದ ಪಶು ಸಂಪತ್ತು ಎಲ್ಲವೂ ಒದಗಿಬರುವುದು; ಇದನ್ನರಿತರೆ ಜೀವನದಲ್ಲಿ ಅತ್ಯುನ್ನತಿಯನ್ನು ಸಾಧಿಸಲು ಅವಕಾಶವಿದೆ ಎನ್ನುವುದು ಈ ಮಂತ್ರ.
ಯೋಪಾಂ ಪುಷ್ಪಂ ವೇದ | ಪುಷ್ಪವಾನ್ ಪ್ರಜಾವಾನ್ ಪಶುಮಾನ್ ಭವತಿ ||
ಚಂದ್ರಮಾ ವಾ ಅಪಾಂ ಪುಷ್ಪಮ್ | ಪುಷ್ಪವಾನ್ ಪ್ರಜಾವಾನ್ ಪಶುಮಾನ್ ಭವತಿ ||
ಯ ಏವಂ ವೇದ | ಯೋಪಾಂ ಆಯತನಂ ವೇದ | ಆಯತನವಾನ್ ಭವತಿ || ೧ ||
ಇನ್ನು ಮೇಲೆ ಹೇಳಿದ ಈ ಪಂಚಭೂತಗಳಲ್ಲಿ ಒಂದಾದ ಅಗ್ನಿಯಲ್ಲಿ ಸಹ ನೀರಿದೆ, ಅಥವಾ ಗ್ನಿಯು ನೀರಿನಲ್ಲೂ ಇದೆ. ಇದನ್ನು ಋಗ್ವೇದ ಪುಷ್ಟೀಕರಿಸುತ್ತದೆ. ಸಾಮಾನ್ಯವಾಗಿ ನೀರು ಬೆಂಕಿಗೆ ವೈರಿ. ಮೇಲುನೋಟಕ್ಕೆ ಅಗ್ನಿಯನ್ನು ನೀರಿನಿಂದಲೇ ನಾವು ಕೆಲವೊಮ್ಮೆ ಶಮನ ಮಾಡುತ್ತೇವೆ. ಇದೊಂದು ವಿರೋಧಾಭಾಸ. ಆದರೂ ಅಗ್ನಿಯೊಳಗೇ ನೀರಿರುವುದು ಸತ್ಯ ಮತ್ತು ನೀರಿನೊಳಗೇ ಅಗ್ನಿಯಿರುವುದೂ ಸತ್ಯ. ಈ ಅಂಶವನ್ನು ನಾವು ಗಮನಿಸುವುದಿಲ್ಲ. ನೀರೆನ್ನುವುದು ಬೆಂಕಿಗಳ ಮೂಲ ಎನ್ನುವ ನೆಲೆಯನ್ನು ಅರಿತಾಗ ಈ ಜಗದ ವಿಭಿನ್ನ ಮುಖದ ಅರಿವು ನಿನಗಾಗುವುದು; ನೀನು ಜ್ಞಾನಿಯಾಗುವಿ ಇದನ್ನರಿತರೆ ಜೀವನದಲ್ಲಿ ಅತ್ಯುನ್ನತಿಯನ್ನು ಸಾಧಿಸಲು ಅವಕಾಶವಿದೆ ಎನ್ನುವುದು ಈ ಮುಂದಿನ ಮಂತ್ರ.
ಅಗ್ನಿರ್ವಾ ಅಪಾಂ ಆಯತನಮ್ | ಆಯತನವಾನ್ ಭವತಿ ||
ಯೋ ಅಗ್ನೇರಾಯತನಂ ವೇದ | ಆಯತನವಾನ್ ಭವತಿ ||
ಆಪೋ ವಾ ಅಗ್ನೇರಾಯತನಮ್ | ಆಯತನವಾನ್ ಭವತಿ ||
ಯ ಏವಂ ವೇದ | ಯೋಪಾಂ ಆಯತನಂ ವೇದ | ಆಯತನವಾನ್ ಭವತಿ ||೨||
ಹೀಗೆ ಸಾಗುವ ಮಂತ್ರಪುಷ್ಪದಲ್ಲಿ ಗಾಳಿಯೊಳಗೆ, ಸೂರ್ಯನೊಳಗೆ, ಚಂದ್ರ ನಕ್ಷತ್ರಗಳೊಳಗೆ, ಮುಗಿಲೊಳಗೆ, ಮಳೆಯೊಳಗೆ, ಮೇಘಗಳೊಳಗೆ ಮತ್ತು ಅಂತ್ಯದಲ್ಲಿ ಕಾಲದೊಳಗೆ ಸಹ ನೀರಿದೆ ಎನ್ನುತ್ತದೆ ವೇದ. ಕಾಲವನ್ನು ಅಳೆಯುವ ಕೆಲಸವನ್ನೂ ಸಹ ನೀರೇ ನಿರ್ವಹಿಸಬಲ್ಲದು. ಅಷ್ಟೇ ಅಲ್ಲ, ಈ ಭೂಮಿಯ ಮೇಲ್ಮೈಯಲ್ಲಿ ಎರಡು ಪಾಲು ನೀರೇ ತುಂಬಿದೆ, ತೆರೆದುಕೊಂಡಿರುವ ಭೂಮಿಯ ಇನ್ನೊಂದು ಪಾಲನ್ನು ಆವರಿಸುವಷ್ಟು ನೀರು ಘನೀಭವಿಸಿ ಸಮಯಕ್ಕಾಗಿ ಕಾದುಕೊಂಡಿದೆ ! ಒಂದೊಮ್ಮೆ ಅ ಘನೀಕೃತ ನೀರು ಸಂಪೂರ್ಣ ಕರಗಿದರೆ ಅಖಂಡ ಭೂಮಂಡಲ ಜಲಾಧಿವಾಸವನ್ನು ಅನುಭವಿಸುತ್ತದೆ ! ಅದನ್ನೇ ಪ್ರಳಯವೆನ್ನಲೂ ಬಹುದು. ೧೯೮೯ರಲ್ಲಿ ತೆರೆಕಂಡ ಮತ್ತು ರಾಷ್ಟ್ರೀಯ ಪ್ರಶಸ್ತಿ ಪಡೆದ ಚಲನಚಿತ್ರ ಇದು. ಶ್ರೀ. ಕೆ ವಿಶ್ವನಾಥ್ ಅವರ ಈ ಚಲನಚಿತ್ರ ಸೂತ್ರಧಾರುಲು.



