ರಾಜ್ಯ

ಭೋವಿ ಸಮಾಜದ ಮುಖಂಡರ ಬಂಧನ, ಬಿಡುಗಡೆ

ವೃತ್ತ ನಿರ್ಮಾಣಕ್ಕೆ ಪಟ್ಟು ಹಿಡಿದಿದ್ದ ಭೋವಿ ಸಮಾಜದ ಕೆಲವು ವ್ಯಕ್ತಿಗಳನ್ನು ಸಿಪಿಐ ರ್ಆ.ರ್ಆ.ಪಾಟೀಲ್ ನೇತೃತ್ವದಲ್ಲಿ ಬಿಡುಗಡೆಗೊಳಿಸಿದರು. ಸಿಬ್ಬಂದಿ
ಪೊಲೀಸ್ ಠಾಣೆಯ ಎದುರಿಗೆ ಜತ್ ಜಾಂಬೋಟಿ ಅಂತಾರಾಜ್ಯ ಹೆದ್ದಾರಿ ಪಕ್ಕದಲ್ಲಿ ಸ್ವಾತಂತ್ರ್ಯ ಯೋಧ ವಡ್ಡರ ಯಲ್ಲಣ್ಣ ವೃತ್ತ ನಿರ್ಮಿಸಬೇಕೆಂದು ಪುರಸಭೆಯಲ್ಲಿ ಭೋವಿ ಸಮಾಜದ ಅರ್ಜುನ ಬಂಡಿವಡ್ಡರ ನೇತೃತ್ವದಲ್ಲಿ ಹಗಲು ರಾತ್ರಿ ಎನ್ನದೆ ನಿರಂತರವಾಗಿ 8/10 ದಿವಸಗಳಿಂದ ಧರಣಿ ಸತ್ಯಾಗ್ರ ಹ ನಡೆದಿತ್ತು. ಈ ಸತ್ಯಾಗ್ರಹಕ್ಕೆ ಮಾನ್ಯತೆ ನೀಡಿ ಕೆಲ ದಿನಗಳ ಹಿಂದೆಯೇ ಪುರಸಭೆ ಮುಖ್ಯಾಧಿಕಾರಿ ನಾಮದೇವ ಲಮಾಣಿ ಖುದ್ದು ಸ್ಥಳ ಪರಿಶೀಲನೆ ನಡೆಸಿ, ಸದರಿ ಜಾಗೆಯಲ್ಲಿ ವೃತ್ತ ನಿರ್ಮಾಣಕ್ಕೆ ಅವಕಾಶ ಇರುವುದಿಲ್ಲ ಎಂದರಿತು ಪೊಲೀಸ್
ಇಲಾಖೆ, ತಮ್ಮ ಅಧಿಕಾರಿಗಳು ಮತ್ತು ಕೆಲವು ಪ್ರಮುಖರ ಜೊತೆಯಲ್ಲಿ ವೃತ್ತ ಕುರಿತಾಗಿ ಸಾಧಕ ಬಾಧಕಗಳ ಬಗ್ಗೆ ಸಮಾಲೋಚನೆ ನಡೆಸಿದ್ದರು. ನಂತರದ ಬೆಳವಣಿಗೆಗಳಲ್ಲಿ ಧರಣಿ ನಿರತರಿಗೆ ವೃತ್ತ ನಿರ್ಮಾಣಕ್ಕೆ ಇಲ್ಲಿ ಅವಕಾಶ ಇರುವುದಿಲ್ಲ. ಇದು ಕಾನೂನು ಬಾಹಿರ ಎಂಬ ಅಂಶವನ್ನು ಮನವರಿಕೆ ಮಾಡಿ, ಬೇರೆಡೆ ಕಾನೂನು ರೀತಿಯಲ್ಲಿ ವೃತ್ತ ನಿರ್ಮಾಣಕ್ಕೆ ಅವಕಾಶ ನೀಡಲಾಗುವುದು ಎಂದಿದ್ದ ಅಧಿಕಾರಿಗಳ ಮಾತಿಗೆ ಕೆಲವು ಊರ ಪ್ರಮುಖರು ಸಹಿತ ಸಮ್ಮತಿ ಸೂಚಿಸಿದ್ದರು. ಏನಿದ್ದರೂ ಕಾನೂನು ರೀತಿಯಲ್ಲಿಯೇ ವರ್ತಿಸಬೇಕು. ನಾವು ವೃತ್ತ ನಿರ್ಮಾಣಕ್ಕೆ ಯಾವುದೇ ಅರ್ಜಿ ಅಥವಾ ಪರವಾಣಿಗೆ ಪಡೆದಿಲ್ಲ. ಕಾನೂನು ವಿರುದ್ದವಾಗಿ ನಾವು ನಡೆದುಕೊಳ್ಳುವುದು ಬೇಡ, ಯೋಗ್ಯ ಸ್ಥಳದಲ್ಲಿ ವೃತ್ತ ನಿರ್ಮಿಸೋಣವೆಂದು ಕಿವಿಮಾತು ಹೇಳಿದರು. ಇವರು ಕೇಳಿಲ್ಲ, ಈಗ ನಾವು ಅಸಹಾಯಕರು ಎಂದು ಮುಖಂಡರೊಬ್ಬರು ತಿಳಿಸಿದರು. ನಾಜುಕು ಅಂಶ ಒಳಗೊಂಡ ಈ ಬೆಳವಣಿಗೆಯನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಿ ಸುಖಾಂತ್ಯಗೊಳಿಸಿ ಪುರಸಭೆ ಆವರಣವನ್ನು ತೆರುವುಗೊಳಿಸಿರುವ ಪೊಲೀಸ್ ಇಲಾಖೆಯ ಕಾರ್ಯಕ್ಕೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.

Related Articles

Leave a Reply

Your email address will not be published. Required fields are marked *

Back to top button

You cannot copy content of this page

Adblock Detected

Please consider supporting us by disabling your ad blocker