ಭಲೆ ಕಿಲಾಡಿ ರಂಗ!

ನಮ್ಮ ಪಬ್ಲಿಕ್ ಟಿವಿ ರಂಗಣ್ಣ ಭಲೇ ಕಿಲಾಡಿ! ಮೋದಿ ಪಟ್ಟಾಭಿಷೇಕದ ಬಳಿಕ ಅವರ ಗುಣಗಾನ ಮಾಡಿದ್ದೇ ಮಾಡಿದ್ದು. ಹೊಸ ಐನೂರು ರೂಪಾಯಿಗಳ ನೋಟಿನಲ್ಲಿ ಚಿಪ್ ನ್ನು ಹುದ್ದುಗಿಸಿ ಚಿಪ್ ರಂಗಣ್ಣ ಎಂದೇ ಮನೆ ಮಾತಾಗಿದ್ದ. ಇವನ ಮೋದಿ ಗುಣಗಾನ ಯಾವ ಮಟ್ಟಕ್ಕಿತ್ತು ಅಂದರೆ ಅಖಿಲ ಕರ್ನಾಟಕದ ಮೋದಿ ಭಕ್ತರ ಡಾರ್ಲಿಂಗ್ ಆಗಿ ಬಿಟ್ಟಿದ್ದ. ಒಂದು ಕಾಲದಲ್ಲಿ ಕರ್ನಾಟಕದ ಮಬ್ಬಕ್ತರ ನಡುವೆ ಇವನ ಜನಪ್ರೀಯತೆಯ ಹತ್ತಿರಕ್ಕೆ ಆಗಿನ ಮುಖ್ಯ ಮಂತ್ರಿಯಾಗಿದ್ದ ಯಡಿಯೂರಪ್ಪ ಸಹ ಬರುತ್ತಿರಲಿಲ್ಲ. ವಿರೋಧ ಪಕ್ಷದವರನ್ನು ಅಸಂವಿಧಾನಿಕ ಮಾತುಗಳಿಂದ ಬೈಯ್ದದ್ದೇ ಬೈಯ್ದದ್ದು. ಇವನೇ ಮುಖ್ಯ ಮಂತ್ರಿ, ಇವನೇ ಪೋಲಿಸ್ ಅಧಿಕಾರಿ, ಇವನೇ ಜಡ್ಜ ಎಲ್ಲಾ ಆಗಿ ಬಿಡ್ತಾ ಇದ್ದ. ಈ ಮಜಾ ತಗೋಳ್ಳೊದಕ್ಕಾಗಿಯೇ ಹಲವರು ಇವನ ಶೋ ನೊಡ್ತಿದ್ದರು. ಆ ಕಾರಣಕ್ಕಾಗಿಯೇ ಕರ್ನಾಟಕದಲ್ಲಿ ಜಗತ್ಪ್ರಸಿದ್ಧನಾಗಿ ಬಿಟ್ಟಿದ್ದ. ಆಗ ಟಿವಿ ಮಾಧ್ಯಮಗಳದ್ದೆ ಕಾರುಬಾರು. ಜನ ಅವರು ಏನು ಉಗಳಿದರೂ ಸ್ವೀಕರಿಸುತ್ತಿದ್ದರು. ಬೈಗುಳದ ಪದಗಳು ಕಿವಿ ಮೇಲೆ ಬೀಳದೆ ಬಹಳ ಕಾಲವಾಗಿ ಬೋರ್ ಆದಾಗ ನಾನು ಸ್ವಲ್ಪ ಹೊತ್ತು ಇವನ ಟಿವಿ ನೋಡ್ತಿದ್ದೆ.
ಕಾಲ ಬದಲಾಯಿತು, ತಂತ್ರಜ್ಞಾನ ಎಲ್ಲವನ್ನೂ ಬದಲಿಸಿತು. ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗ ತೊಡಗಿದ ಮೇಲೆ ಟಿವಿ ಮಾಧ್ಯಮಗಳು ಬೊಗಳುವುದರಲ್ಲಿ ಎಷ್ಟು ಸುಳ್ಳುಗಳಿವೆ ಅಂತ ಸಾಮಾನ್ಯ ಜನಕ್ಕೆ ಗೊತ್ತಾಗೋದಕ್ಕೆ ಶುರುವಾಯ್ತು. ಮೋದಿ ಸರಕಾರ ಬೆತ್ತಲಾಗುತ್ತಾ ಸಾಗಿತು. ಗೋದಿ ಮೀಡಿಯಾ ಮೂಲೆ ಸೇರ್ತು.
ಈಗೊಂದು ವರ್ಷದಿಂದ ಒಂದು ಸಲವೂ ನಾನು ಇವನ ಟಿವಿ ಹಚ್ಚಿರಲಿಲ್ಲ. ಈಗೊಂದು ತಿಂಗಳ ಹಿಂದೆ ಯಾರೋ ಫೇಸಬುಕ್ಕಿನಲ್ಲಿ ಇವನ ಮಾತಿನ ಕ್ಲಿಪ್ ಹಾಕಿದ್ದರು. ನೋಡ್ತಿನಿ ನಮ್ಮ ರಂಗಣ್ಣ! ಅದೇ ಬೈಗಳು, ಅದೇ ಠೇಂಕಾರ, ಆದರೆ ಈಗ ಆತ ಬೈತಾ ಇದ್ದದ್ದು ಮೋದಿಯನ್ನ! ಅದೂ ಈ ಮಕ್ಕಳ ಪ್ರತಿಭಟನೆ ಶುರುವಾದ ಮೇಲಂತೂ ಇವನ ಬಣ್ಣ ಪೂರ್ತಿ ಬದಲಾಗಿ ಹೋಗಿದೆ. ಆಗ ನಾನು ಕೈಲಾಸಂ ರವರ “ನಾನು ಕೋಳಿಕೆ ರಂಗ ‘ ಹಾಡಿನ ದಾಟಿಯಲ್ಲಿ ” ನಾನು ಭಲೆ ಕಿಲಾಡಿ ರಂಗ! ಭ ನು ಕಿ ನು ರ ನು ಸೊನ್ನೆ ಮತ್ತೆ ಗ ” ಎಂದು ಹಾಡಿ ಕೊಳ್ಳೋದಕ್ಕೆ ಶುರು ಮಾಡ್ದೆ.
–ಶ್ರೀಪಾದ್ ಹೆಗಡೆ (ಫೇಸ್ಬುಕ್ ಬರಹ)



