ಕ್ರೈಮ್

ಚಂದದ ಹುಡುಗನನ್ನ ಕೋಟೆಯಿಂದ ತಳ್ಳಿ ಕೊಂ*ಳಾ ಲವರ್?

ಪುಣೆ ಲೋಹಗಢ ದುರಂತಕ್ಕೆ ನಡುಕ ಹುಟ್ಟಿಸುವ ಟ್ವಿಸ್ಟ್!

ಮುಂದಿನ ತಿಂಗಳು ಜೈಪುರದ ಅರಮನೆಯಲ್ಲಿ ಅದ್ಧೂರಿಯಾಗಿ ಮದುವೆಯಾಗಬೇಕಿದ್ದ ಚಂದದ ಹುಡುಗ, ಕೋಟೆಯ 350 ಅಡಿ ಆಳದ ಕಂದಕಕ್ಕೆ ಬಿದ್ದು ಹೆಣವಾಗಿದ್ದ! ಮೊದಲು ಫೋಟೋ ತೆಗೆಯುವಾಗ ಕಾಲು ಜಾರಿ ಬಿದ್ದಿದ್ದಾನೆ ಎಂದು ನಂಬಲಾಗಿದ್ದ ಈ ದುರಂತದ ಹಿಂದೆ ಈಗ ಯಾರಿಗೂ ಊಹಿಸಲಾಗದ ಕರಾಳ ರಹಸ್ಯ ಬಯಲಾಗಿದೆ. ಆತನ ಸಾವಿಗೆ ಬೇರೆ ಯಾರೂ ಅಲ್ಲ, ಮದುವೆಯಾಗಬೇಕಿದ್ದ ಆ ಲವರ್‌ (ಭಾವಿ ಪತ್ನಿ) ಕಾರಣನಾ ಅನ್ನೋ ಶಂಕೆ ಈಗ ದಟ್ಟವಾಗಿದೆ!

ಹುಟ್ಟುಹಬ್ಬದ ಸಂಭ್ರಮ ತಂದ ತಲ್ಲಣ!

ಪುಣೆಯ ಪ್ರಮುಖ ಉದ್ಯಮಿ ಕುಟುಂಬದ 24 ವರ್ಷದ ಹ್ಯಾಂಡ್‌ಸಮ್ ಯುವಕ ಕೇತನ್ ವಿಶಾಲ್ ಅಗರ್ವಾಲ್. ಮದುವೆಗೂ ಮುನ್ನ ತನ್ನ ಭಾವಿ ಪತ್ನಿಯ ಬರ್ತ್‌ಡೇ ಆಚರಿಸಲು ಸ್ನೇಹಿತರ ಜೊತೆ ಮಹಾರಾಷ್ಟ್ರದ ಪ್ರಸಿದ್ಧ ಲೋಹಗಢ ಕೋಟೆಗೆ ಟ್ರಕ್ಕಿಂಗ್ ಹೋಗಿದ್ದ. ಆದರೆ ಅಲ್ಲಿ ನಿಗೂಢವಾಗಿ ಕಂದಕಕ್ಕೆ ಬಿದ್ದು ಪ್ರಾಣ ಕಳೆದುಕೊಂಡಿದ್ದ.

ಪೋಲಿಸ್ ತನಿಖೆಯಲ್ಲಿ ಬಯಲಾಯ್ತು ಅಸಲಿ ಕಥೆ!

ಮೊದಲಿಗೆ ಇದೊಂದು ಆಕಸ್ಮಿಕ ಅಪಘಾತ ಎಂದು ಪೊಲೀಸರು ಭಾವಿಸಿದ್ದರು. ಆದರೆ ಮಗನ ಸಾವಿನ ಹಿಂದೆ ಸಂಚಿದೆ ಎಂದು ಹೆತ್ತವರು ದೂರಿದಾಗ, ಪೊಲೀಸರು ಆಕೆಯ ಮೊಬೈಲ್ ಕರೆಗಳು ಹಾಗೂ ಸೋಶಿಯಲ್ ಮೀಡಿಯಾವನ್ನು ಜಾಲಾಡಿದ್ದಾರೆ. ಆಗ ಸಿಕ್ಕ ಸುಳಿವುಗಳೇ ಬೇರೆ!ಕೊಲೆಗೆ ಕಾರಣವಾಯ್ತಾ ಮತ್ತೊಬ್ಬನ ಜೊತೆ ಅಫೇರ್?: ಪೊಲೀಸರ ತನಿಖೆಯ ಪ್ರಕಾರ, ಆಕೆಗೆ ಮತ್ತೊಬ್ಬ ಯುವಕನೊಂದಿಗೆ ಪ್ರೇಮ ಪ್ರಕರಣ ಇತ್ತು ಎನ್ನಲಾಗಿದೆ.

ಕೋಟೆಯ ಮೇಲಿಂದ ತಳ್ಳಿದ್ರಾ?

ಈ ಶ್ರೀಮಂತ ಹುಡುಗನ ಜೊತೆಗಿನ ಮದುವೆಯನ್ನು ತಪ್ಪಿಸಲು, ಆಕೆ ಮತ್ತು ಆಕೆಯ ಪ್ರಿಯಕರ ಸೇರಿ ಪ್ಲಾನ್ ಮಾಡಿ ಕೇತನ್‌ನನ್ನು ಕೋಟೆಯ ಮೇಲಿಂದ ತಳ್ಳಿ ಕೊಲೆ ಮಾಡಿರಬಹುದು ಎಂದು ಪೊಲೀಸರು ಈಗ ಶಂಕಿಸಿದ್ದಾರೆ.ಯಾವ ಮನೆಯಲ್ಲಿ ಮದುವೆಯ ಸಡಗರ ಇರಬೇಕಿತ್ತೋ, ಅಲ್ಲಿ ಈಗ ಹೆತ್ತವರ ಕಣ್ಣೀರು ಮುಗಿಲು ಮುಟ್ಟಿದೆ. ಸದ್ಯ ಪೊಲೀಸರು ಈ ನಿಗೂಢ ಸಾವನ್ನು ‘ಕೊಲೆ ಶಂಕೆ’ ಅಡಿಯಲ್ಲಿ ತೀವ್ರವಾಗಿ ತನಿಖೆ ನಡೆಸುತ್ತಿದ್ದಾರೆ.

ಪವನ್ ಕುಮಾರ್

Related Articles

Leave a Reply

Your email address will not be published. Required fields are marked *

Back to top button

You cannot copy content of this page

Adblock Detected

Please consider supporting us by disabling your ad blocker