ಕೌಟುಂಬಿಕ ಕಲಹ ಪತ್ನಿ ನಾದಿನಿಯ ಹ*ತ್ಯೆಗೈದ ಗಂಡ! ಡಬಲ್ ಮ*ರ್ಡರ್ ಗೆ ಬೆಚ್ಚಿಬಿದ್ದ ಚಿಂತಾಮಣಿ ನಗರ.

ಚಿಕ್ಕಬಳ್ಳಾಪುರ : ಕುಡುಕ ಗಂಡನ ಕಿರುಕುಳಕ್ಕೆ ಹೆದರಿದ ಹೆಂಡತಿ ಮಕ್ಕಳ ಸಮೇತ ತವರು ಮನೆ ಸೇರಿದ್ಳು, ಹೆಂಡತಿಯ ತವರು ಮನೆಗೆ ಬಂದ ಗಂಡ ಪತ್ನಿ ಮತ್ತು ನಾದಿನಿಯ ಹ*ತ್ಯೆಗೈದು, ಅನಂತರ ಕೋಲಾರದ ಗಲ್ ಪೇಟೆ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾನೆ.
ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಗದ ಜೆಜೆ ಕಾಲೋನಿಯಲ್ಲಿ ಇಂದು ಬೆಳಗ್ಗೆ 6 ಗಂಟೆ ಸುಮಾರಿಗೆ ಘಟನೆ ನಡೆದಿದೆ, ಭೀಕರ ಹ*ತ್ಯೆಯಲ್ಲಿ ಶಮಾ (25), ಆಕೆಯ ಸಹೋದರಿ ರೇಷ್ಮಾ(18) ಕತ್ತು ಸೀಳಿ ಹ*ತ್ಯೆ ಮಾಡಲಾಗಿದೆ, ಕೊ*ಲೆಗೈದ ಆರೋಪಿ ಏಜಸ್ ಖಾನ್ ಪೊಲೀಸರಿಗೆ ಶರಣಾಗಿದ್ದಾನೆ.
ಕೊ*ಲೆಯಾದ ಶಮಾ ಮತ್ತು ಆರೋಪಿ ಏಜಸ್ ಖಾನ್ ನನ್ನ 8 ವರ್ಷಗಳ ಹಿಂದೆ ಮದುವೆಯಾಗಿದ್ದಳು, ಇವರ ದಾಪಂತ್ಯಕ್ಕೆ ಇಬ್ಬರು ಗಂಡು ಮತ್ತು ಒಂದು ಹೆಣ್ಣು ಮಗುವಿದೆ, ಏಜಸ್ ಖಾನ್ ಕೋಲಾರದ ಗಲ್ ಪೇಟೆ ನಿವಾಸಿಯಾಗಿದ್ದು ಹೆಂಡತಿ ಮಕ್ಕಳ ಜೊತೆಯಲ್ಲಿ ವಾಸವಾಗಿದ್ದರು.

ಏಜಸ್ ಖಾನ್ ಗೆ ಕುಡಿತ ಚಟ ಇತ್ತು, ಸಂಸಾರ ನೋಡಿಕೊಳ್ಳುತ್ತಿರಲಿಲ್ಲ, ದೈಹಿಕ ಕಿರುಕುಳ ಕೊಡುತ್ತಿದ್ದ, ಗಂಡನ ಕಿರುಕುಳಕ್ಕೆ ಹೆದರಿದ ತನ್ನ ತವರು ಮನೆಯಾದ ಚಿಂತಾಮಣಿಗೆ ಬಂದು ಬಿಡುತ್ತಿದ್ದಳು, ಹಿರಿಯರು ರಾಜಿ ಸಂಧಾನ ಮಾಡಿ ಮತ್ತೆ ಗಂಡನ ಮನೆಗೆ ಕಳಿಸುತ್ತಿದ್ದರು, ಆದರೆ ತನ್ನ ವರ್ತನೆ ತಿದ್ದುಕೊಳ್ಳದ ಏಜಸ್ ಖಾನ್ ಮತ್ತೆ ಹೆಂಡತಿಗೆ ಕಿರುಕುಳ ಕೊಡುತ್ತಿದ್ದ ಎಂದು ಮೃತಳ ಪೋಷಕರು ಆರೋಪ ಮಾಡಿದ್ದಾರೆ.
ಕೊಲೆ ಪ್ರಕರಣ ಸಂಬಂಧ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ, 6 ತಿಂಗಳ ಹಿಂದೆಯಷ್ಟೇ ಆರೋಪಿ ಏಜಸ್ ಖಾನ್ ತಾಯಿ ತೀರಿಕೊಂಡ ನಂತರ ಗಂಡನ ಕಿರುಕುಳಕ್ಕೆ ಹೆದರಿ ಶಮಾ ತವರು ಮನೆಗೆ ಬಂದಿದ್ದಾಳೆ, ಜುಲೈ 5 ರ ರಾತ್ರಿ ಹೆಂಡತಿಯನ್ನ ಮನೆಗೆ ಕರೆದುಕೊಂಡು ಹೋಗಲು ಹೆಂಡತಿ ಮನೆಗೆ ಬಂದಿದ್ದಾನೆ, ಈ ವೇಳೆ ಗಂಡ ಹೆಂಡತಿ ನಡುವೆ ಜಗಳವಾಗಿದೆ.
ಮರುದಿನ ಬೆಳಗ್ಗೆ ಮತ್ತೆ ಗಂಡ ಹೆಂಡತಿ ನಡುವೆ ಜಗಳವಾಗಿದೆ, ಜಗಳದಲ್ಲಿ ಏಜಸ್ ಖಾನ್ ಹೆಂಡತಿ ಮತ್ತು ನಾದಿನಿಯ ಕತ್ತು ಸೀಳಿ ಹತ್ಯೆ ಮಾಡಿದ್ದಾನೆ, ಅನಂತರ ಮೂವರು ಮಕ್ಕಳನ್ನು ಕರೆದುಕೊಂಡು ಕೋಲಾರಕ್ಕೆ ಹೋಗಿದ್ದಾನೆ, ಕೋಲಾರದ ತನ್ನ ಮನೆಯಲ್ಲಿ ಮಕ್ಕಳನ್ನು ಬಿಟ್ಟು ಗಲ್ ಪೇಟೆ ಪೊಲೀಸ್ ಠಾಣೆಗೆ ಬಂದು ಹೆಂಡತಿ ಮತ್ತು ನಾದಿನಿ ಕೊಲೆ ಮಾಡಿರುವ ಸುದ್ದಿ ತಿಳಿಸಿದ್ದಾನೆ.
ಅಲ್ಲಿನ ಪೊಲೀಸರು ಚಿಂತಾಮಣಿ ನಗರ ಪೊಲೀಸರಿಗೆ ವಿಷಯ ತಿಳಿಸಿದ್ದು, ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ, ಚಿಂತಾಮಣಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನ ವಶಕ್ಕೆ ಪಡೆದು ವಿಚಾರಣೆ ಮಾಡಿತ್ತಿರುವುದ್ದಾಗಿ ತಿಳಿಸಿದರು.



