ಪರಪ್ಪನ ಅಗ್ರಹಾರವೆಂಬೋ ನೀವರಿಯದ ಲೋಕ!

ಅಲ್ಲಿಗೆ ಹೊರಗಿನವರಿಗೆ ಪ್ರವೇಶವಿಲ್ಲ; ಒಳಗೆ ಏನು ನಡೆಯುತ್ತಿದೆ ಎಂಬುದು ಕ್ಯಾಮರ ಮುಂದೆ ಕುಂತು ಪುಂಖಾನುಪುಂಖವಾಗಿ ಯಾರೋ ಬರೆದುಕೊಟ್ಟ ಸ್ಕಿçಪ್ಟ್ ಓದುವ ಆ್ಯಂಕರ್ಗಂತೂ ಬಿಲ್ಕುಲ್ ಏನೇನೂ ಗೊತ್ತರಿವುದಿಲ್ಲ. ಬರೆದುಕೊಟ್ಟಿದ್ದು ಓದೋದಷ್ಟೇ ಅವನ ಕೆಲಸ. ಇಷ್ಟಕ್ಕೂ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಅತ್ತೆ ಸೊಸೆಯ ಜಗಳವನ್ನೇ ನಮ್ಮಲ್ಲೇ ಮೊದಲು ಎಂದು ಶಂಖ ಊದುವ ಮಾಧ್ಯಮಗಳಿಗೆ ಈಗಿನ ತಲೆಮಾರಿನ ವರದಿಗಾರರಿಗೆ ತನಿಖಾ ವರದಿ ಎಂದರೆ ಏನೇನೂ ಗೊತ್ತಿಲ್ಲ.
ಇಷ್ಟಕ್ಕೂ ಇಲ್ಲಿ ಬ್ಯಾಂಕ್ ಅಧಿಕಾರಿಗಳೂ ಇದ್ದಾರೆ, ಅದೇ ಬ್ಯಾಂಕುಗಳಿಂದ ಸಾಲ ಪಡೆದುಕೊಂಡ ರಿಯಲ್ ಎಸ್ಟೇಟ್ ಉದ್ಯಮಿಯೂ ಇದ್ದಾನೆ, ಇಂತಹ ರಿಯಲ್ ಎಸ್ಟೇಟ್ ಉದ್ಯಮಿಯನ್ನು ಮಟ್ಟಸವಾಗಿ ಮುಗಿಸಿದ ರೌಡಿಯೂ ಇದ್ದಾನೆ. ಜೊತೆಗೆ ವಿಕೃತ ಕಾಮಿ ಉಮೇಶ್ ರೆಡ್ಡಿ, ಇಂತಹ ಉಮೇಶ್ ರೆಡ್ಡಿಯೇ ನಾಚಿಕೊಳ್ಳುವಂತಹ ಕರ್ನಾಟಕ ರಾಜಕಾರಣದ ದೊಡ್ಡಮನೆಯ ಹುಡುಗ ಪ್ರಜ್ವಲ್ ರೇವಣ್ಣನೂ ಇದ್ದಾನೆ, ತುತ್ತು ಕೂಳಿಗಾಗಿ ಮೈ ಮಾರಿಕೊಂಡ ವೈಶ್ಯೆ, ಇಂತವರ ತಲೆ ಹಿಡಿದು ಬದುಕುವ ತಲೆ ಹಿಡುಕ, ಪವಿತ್ರ ಕಾವಿ ತೊಟ್ಟು ತಿನ್ನ ಬಾರದ್ದು ತಿಂದ ‘ಮಹಾ ಶರಣ’, ಯಾರೋ ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿರುವ ಬಡ ಅಮಾಯಕ ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆ ಹೊರ ಜಗತ್ತಿನಲ್ಲಿರುವವರ ಪ್ರತಿಯೊಬ್ಬರ ಪ್ರತಿಬಿಂಬವೂ ಇಲ್ಲಿದೆ. ಇವರಿಗಾಗಿಯೇ ಇಲ್ಲೊಂದು ರೇಡಿಯೋ ಸ್ಟೇಷನ್ ಕೂಡಾ ಇದೆ. ಇಲ್ಲಿಗಿಂತ ಅದ್ಭತ ನಿರೂಪಕ ಅಲ್ಲಿದ್ದಾನೆ. ಸುಶಿಕ್ಷಿತರು ಅಶಿಕ್ಷಿತರು ಇರುವಂತಹ ಇಂತಹ ತಾಣವನ್ನ ಪರಪ್ಪನ ಅಗ್ರಹಾರ ಎಂಬೋ ಹೆಸರಿನಿಂದ ಕರೆಯಲ್ಪಡುತ್ತದೆ. ಜೈಲೆಂದರೆ ಅದು ಬರಿ ಶಿಕ್ಷೆ ನೀಡುವ ತಾಣವಲ್ಲ, ಖೈದಿಗಳ ಮನಃಪರಿವರ್ತನೆಯ ಜಾಗ. ಆದರೇ ಇಂತಹ ಜಾಗ ಇಂದೇನಾಗಿದೆ? ಉಳ್ಳವರ ಪಾಲಿನ ದುಡ್ಡಪ್ಪನ ಅಗ್ರಹಾರ.
ಒಂದು ಪಿಎಸ್ಐ ಹುದ್ದೆಗೆ ಎಂಭತ್ತು ಲಕ್ಷದಿಂದ ಒಂದು ಕಾಲು ಕೋಟಿ ನಂತರ ಆಯಾಕಟ್ಟಿನ ಸ್ಟೇಷನ್ಗಳೇ ಬೇಕು ಎಂದರೆ ಮತ್ತೊಂದಿಷ್ಟು ಪೀಕು. ನಿಮಗೆ ಒಂದು ವಿಷಯ ಗೊತ್ತಿರಲಿ ಬೆಂಗಳೂರಿನ ಉಪ್ಪಾರಪೇಟೆ ಸ್ಟೇಷನ್ನಿಗೆ ಇನ್ಸ್ಪೆಕ್ಟರ್ ಆಗಿ ಬರಬೇಕೆಂದರೆ ಮೂರರಿಂದ ಐದು ಕೋಟಿ ಮೇಲಿನವರಿಗೆ ಕೊಡಬೇಕು ಅದು ಕೂಡ ಕೇವಲ ಆರು ತಿಂಗಳ ಮಟ್ಟಿಗೆ. ಇಂತದ್ದರಲ್ಲಿ ಪರಪ್ಪನ ಅಗ್ರಹಾರವೆಂಬೋ ದುಡ್ಡಪ್ಪನ ಅಗ್ರಹಾರಕ್ಕೆ ಜೈಲರ್ ಆಗಿ ಬರಬೇಕೆಂದರೆ ಅದೆಷ್ಟು ಕೊಡಬೇಕು ಇದು ನಿಮ್ಮ ಊಹೆಗೆ ಬಿಟ್ಟಿದ್ದು. ಇಷ್ಟೆಲ್ಲ ಕೊಟ್ಟು ಇವರುಗಳು ಜನಸೇವೆ ಮಾಡಬೇಕು ಅಂತ ನೀವು ನೀರಿಕ್ಷಿಸಿದರೆ ಕಾಕಿಗಳಿರಲಿ ಜನರೇ ಅಂಡು ಬಡಿದುಕೊಂಡು ನಗ್ತಾರೆ.

ಇರಲಿ ಅಸಲಿ ವಿಷಯಕ್ಕೆ ಬರ್ತೀನಿ, ಇಂತಹ ಜೈಲಿಗೆ ನ್ಯಾಯಾಂಗ ಬಂದನಕ್ಕೊಳಗಾದ ವಿಚಾರಣಾಧಿನ ಖೈದಿಯನ್ನ ರಾತ್ರಿ ಹನ್ನೊಂದು ಗಂಟೆ ಸರಿಸುಮಾರಿಗೆ. ಅಲ್ಲಿನ ಎಲ್ಲಾ ಪ್ರಕ್ರಿಯೆಗಳು ಮುಗಿದು ಅವನನ್ನು ಕುರಿದೊಡ್ಡಿಯಂತಹ ಬ್ಯಾರಕ್ನಲ್ಲಿ ತುಂಬುತ್ತಾರೆ. ಅಲ್ಲಿ ಅವನಿಗೊಂದು ದಿಂಬು, ಬೆಡ್ಶೀಟ್ ಸಿಗುತ್ತೆ. ಮರುದಿನ ಬೆಳಿಗ್ಗೆ ಎಂದಿನಂತೆ ಎಲ್ಲಾ ಖೈದಿಗಳನ್ನು ಸಾಲಾಗಿ ನಿಲ್ಲಿಸಲಾಗುತ್ತೆ. ಎಲ್ಲರಿಗೂ ಕೊಟ್ಟಂತೆ ಅವನ ಕೈಗೂ ಒಂದು ಝಾಡು ಕೊಡುತ್ತಾರೆ. ಅವನು ಆ ಜೈಲಿನ ಆವರಣವನ್ನೆಲ್ಲ ಗುಡಿಸಿಕೊಂಡು ಬರಬೇಕು. ಹಾ, ಈ ಕೆಲಸದಿಂದ ತಪ್ಪಿಸಿಕೊಳ್ಳಬಹುದು ಅದಕ್ಕಾಗಿ ಕನಿಷ್ಟ ಐನೂರು ರೂ ಕೊಡಬೇಕು. ನಿಮಗೆ ಈ ಒಂದು ವಿಷಯ ಗೊತ್ತಿರಲಿ ಜೈಲಿನ ಎಲ್ಲಾ ದೇಖಾರೇಖಿಗಳನ್ನು ಓಡಿಕೊಳ್ಳುವುದು ಕಾಕಿಗಳ ಕೆಲಸವೆಂದು ಕೊಂಡರೆ ಅದು ಹೊರಗಿನ ಪ್ರಪಂಚದ ಭ್ರಮೆ. ಇವೆಲ್ಲವನ್ನು ನೋಡಿಕೊಳ್ಳುವುದು ಇಲ್ಲಿನ ಸಜಾ ಖೈದಿಗಳು!
ಹೊಸದಾಗಿ ಬಂದ ಖೈದಿಗೆ ಆರೋಗ್ಯ ತಪಾಸಣೆ, ಇಲ್ಲೂ ಕೂಡಾ ಸಜಾ ಖೈದಿಯದೇ ದರ್ಬಾರ್. ಗಂಟೆಗಟ್ಟಲೆ ಕ್ಯೂನಲ್ಲಿ ನಿಲ್ಲಲು ಸಾಧ್ಯವಿಲ್ಲ ಎನ್ನುವ ಖೈದಿ ಇವರ ಕೈಗೆ ಒಂದಷ್ಟು ದುಡ್ಡು ತುರುಕಿದರೆ ಸಾಕು ಎಲ್ಲರಿಗಿಂತ ಮೊದಲು ಆತನ ಆರೋಗ್ಯ ತಪಾಸಣೆಯಾಗಿರುತ್ತದೆ.
ಹೊರಜಗತ್ತಿನಲ್ಲಿ ಹೇಗೆ ಏರಿಯಾಗೊಬ್ಬ ಡಾನ್ ಇರುತ್ತಾನೋ ಹಾಗೆ ಇಲ್ಲೂ ಕೂಡ ಒಂದೊಂದು ಕ್ಷೇತ್ರಕ್ಕೆ ಒಬ್ಬೊಬ್ಬ ಡಾನ್ ಇರುತ್ತಾನೆ. ಉದಾಹರಣೆಗೆ ಹೈ ಪ್ರೊಫೈಲ್ ಅರ್ಥಾತ್ ಪ್ರತಿಷ್ಟಿತ ವ್ಯಕ್ತಿಯೊಬ್ಬ ವಿಚಾರಣಾಧಿನ ಖೈದಿಯಾಗಿ ಜೈಲಿಗೆ ಬರುತ್ತಿದ್ದಾನೆಂದು ಗೊತ್ತಾದರೆ ಸಾಕು (ಹಾಂ, ಇದು ಹೊಗಡೆಯವರಿಗಿಂತ ಇಲ್ಲಿನವರಿಗೆ ಮುಂಚೆಯೇ ಗೊತ್ತಿರುತ್ತದೆ) ಅವನ ಸೇವೆಗೆಂದು ಈ ತಂಡ ಪೈಪೋಟಿ ನಡೆಸುತ್ತದೆ. ಇಂಥವರ ಸೇವೆ ಮಾಡೋದಿಕ್ಕೆ ವಾರದ ಶುಲ್ಕ ಹಲವು ಲಕ್ಷಗಳಷ್ಟೆ. ಹಾಗಾಗಿಯೇ ಇಂತ ಪೈಪೋಟಿ ನಡೆಯುವುದು. ಕೆಲ ದಿನಗಳ ಹಿಂದೆ ನಟ ದರ್ಶನ್ ಜೈಲಿನಲ್ಲಿ ಐಷಾರಾಮಿಯಾಗಿ ಸಿಗೆರೇಟು ಸೇದುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದು ಕೂಡ ದರ್ಶನ್ನ ಸೇವೆಗಾಗಿ ಪೈಪೋಟಿ ನಡೆಸಿ ಸೋತ ತಂಡದಿAದ ಬಿಡುಗಡೆಯಾದ ವಿಡಿಯೋ. ಅಂದ ಹಾಗೆ ಪೈಪೋಟಿಯಲ್ಲಿ ಗೆದ್ದು ದರ್ಶನನ ಸೇವೆ ಮಾಡುತ್ತಿದ್ದದ್ದು ಮತ್ತೊಬ್ಬ ನಟೋರಿಯಸ್ ರೌಡಿ ಸೈಕಲ್ ರವಿಯ ನೇತೃತ್ವದ ತಂಡ. ಯಾವಾಗ ವಿಡಿಯೋ ವೈರಲ್ ಆಯಿತೋ ಸೈಕಲ್ ರವಿಯ ತಂಡ ಆ ವಿಡಿಯೋ ಮಾಡಿದವನನ್ನು ಜೈಲಿನ ಆವರಣದಲ್ಲಿಯೇ ಹಿಗ್ಗಾ ಮುಗ್ಗಾ ಥಳಿಸಿದ್ದರು. ಈ ವಿಡಿಯೋ ಕೂಡಾ ಎಂದಿನAತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಮಾಧ್ಯಮಗಳಲ್ಲೂ ವರದಿಯಾಗಿದ್ದರೂ ಸಹ ಈ ವಿಷಯ ತಮಗೇನೂ ಗೊತ್ತೇ ಇಲ್ಲವೆಂಬಂತೆ ಜೈಲಿನ ಅಧಿಕಾರಿಗಳು ವರ್ತಿಸಿದ್ದರು.
ಪರಪ್ಪನ ಅಗ್ರಹಾರದ ಸುತ್ತಮುತ್ತ ಜಾಮರ್ ಅಳವಡಿಸಿರುವುದರಿಂದ ಈ ಭಾಗದಲ್ಲಿ ಸಿಗ್ನಲ್ ಸಿಗುವುದೇ ಕಷ್ಟ. ಆದರೆ ಜೈಲಿನ ಒಳಗಡೆ ಆ ಸಮಸ್ಯೆ ಇಲ್ಲ. ಇಲ್ಲಿ ಫೋನ್ ಉಪಯೋಗಿಸುವುದಕ್ಕೆ ಇಂತಿಷ್ಟು ಹಣ ನೀಡಿದರೇ ಸಾಕು ಯಾವುದೇ ನಿರ್ಬಂದವಿರುವುದಿಲ್ಲ. ಇಲ್ಲಿ ಬಳಸುವ ಎಲ್ಲ ಫೋನ್ಗಳು ನಿಶಾಚರಿಯಂತೆ ರಾತ್ರಿ ಹೊತ್ತಿನಲ್ಲಿ ಮಾತ್ರ ಕೆಲಸ ಮಾಡುತ್ತವೆ ಅದು ಕೇವಲ ವಾಟ್ಸಪ್ ಕರೆಗಳು ಮಾತ್ರ! ಪ್ರತೀ ಶನಿವಾರ ಬಟವಾಡೆ ದಿನ ಸಜಾ ಖೈದಿಗಳು ತಾವು ವಸೂಲಿ ಮಾಡಿದ ಹಣ ಇಲ್ಲಿನ ಅಧಿಕಾರಿಗಳೊಂದಿಗೆ ಹಂಚಿಕೊಳ್ಳುವ ದಿನ. ಒಂದು ವೇಳೆ ಕ್ಯಾಲ್ಕುಲೇಟರ್ನಲ್ಲಿ ಹಾಕಿದ ಲೆಕ್ಕ ತಪ್ಪಾಗಬುದು ಇವರ ಲೆಕ್ಕ ಉಹುಂ ಬಿಲ್ಕುಲ್ ಇಲ್ಲ ಅಷ್ಟು ಕರಾರುವಕ್ಕಾದ ಲೆಕ್ಕಚಾರ ಇವರದು.
ಕಳೆದ ವಾರ ಉಮೇಶ್ ರೆಡ್ಡಿ ಟಿವಿ ನೋಡುತ್ತಿದ್ದ ದೃಶ್ಯ ವೈರಲ್ ಆಗಿತ್ತಲ್ಲ ಆ ಜೈಲಿನಲ್ಲಿ ನಡೆಸುವ ಕೇಬಲ್ ದಂಧೆಯ ಮೊತ್ತವೆಷ್ಟು ಗೊತ್ತಾ? ಅದನ್ನು ನಡೆಸುವವನು ಐವತ್ತು ಲಕ್ಷ ಕೊಡಬೇಕು ಅದು ಕೇವಲ ಆರು ತಿಂಗಳ ಅಲ್ಪಾವಧಿಯ ಟೆಂಡರ್! ಇದು ಜೈಲಿನೊಳಗೆ ನಡೆಯುವ ದಂಧೆಯ ಅತಿ ಸಣ್ಣ ಉದಾಹರಣೆಯಷ್ಟೆ.
ಇದೆಲ್ಲ ಕುರಿ ದೊಡ್ಡಿಯಂತಹ ಬ್ಯಾರಕ್ನ ಕತೆಯಾದರೆ ವಿಐಪಿ ವಿವಿಐಪಿ ಸೆಲ್ನದೆ ಮತ್ತೊಂದು ಕತೆ. ಸಾಕಷ್ಟು ಹಣವಂತರು ದೊಡ್ಡ ದೊಡ್ಡ ರೌಡಿಗಳಿಗೆ (ವಿಚಾರಣಾಧಿನ ಖೈದಿಗಳಿಗೆ) ಈ ಸೆಲ್ ದೊರಕುತ್ತದೆ. ಒಂದಷ್ಟು ದುಡ್ಡು ಖರ್ಚು ಮಾಡಿದರೆ ಸಾಕು ಹೆಡ್ ಮಸಾಜ್ನಿಂದ ಬಾಡಿ ಮಸಾಜ್ವರೆಗೂ ಇಲ್ಲಿ ಜನ ಬರುತ್ತಾರೆ. ದೊಡ್ಡ ರೌಡಿಯೊಬ್ಬ ಅಂದರ್ ಆಗುತ್ತಾನೆಂದು ಗೊತ್ತಾದರೆ ಸಾಕು ಆತನ ಶಿಷ್ಯಂದಿರು ಪಿಟಿ ಕೇಸ್ ಹಾಕಿಸಿಕೊಂಡು ಇಲ್ಲಿ ಬಂದು ಸೆಟಲ್ ಆಗಿರುತ್ತಾರೆ. ಹೊರಗಿನಿಂದ ತಿಂಗಳಿಗಾಗುವಷ್ಟು ಪ್ರಾವಿಷನ್ ಬಂದಿರುತ್ತದೆ, ಇದರ ಜೊತೆ ಡ್ರೈ ಫ್ರೂಟ್ಸ್ ಕೂಡಾ ಇರುತ್ತದೆ. ಅಫ್ಕೋರ್ಸ್ ಇದರಲ್ಲಿ ಅರ್ಧಕರ್ಧ ಇಲ್ಲಿನ ಅಧಿಕಾರಿಗಳ ಮನೆ ಸೇರಿರುತ್ತದೆ. ಇಂದು ಬೆಳಿಗ್ಗೆ ನನಗಿಂತಹ ತಿಂಡಿ ಮಧ್ಯಾಹ್ನ ಇಂತಹ ಊಟ ಬೇಕೆಂದು ಸಣ್ಣದಾಗಿ ಆರ್ಡರ್ ಮಾಡಿದರೆ ಸಾಕು ಜೀ ಹುಜೂರ್ ಎಂದು ಅವೆಲ್ಲ ರೆಡಿಯಿರುತ್ತವೆ. ಅಣ್ಣ ಊಟ ಮಾಡುವುದೊಂದೇ ಬಾಕಿ, ಕೈ ತೊಳೆಯಲು, ತೊಳೆದ ಕೈ ಒರೆಸಲು ಶಿಷ್ಯಂದಿರು ನಡು ಬಗ್ಗಿಸಿ ನಿಂತಿರುತ್ತಾರೆ.
ಸನ್ಮಾನ್ಯ ಯಡಿಯೂರಪ್ಪ, ಜನಾರ್ಧನ ರೆಡ್ಡಿ, ಕುಮಾರಿ ಜಯಲಲಿತಾ ಮಾತೃಶ್ರಿ ಶಶಿಕಲಾ ಇಂತ ವಿಐಪಿ ಸೆಲ್ಗಳಲ್ಲೆ ಇದ್ದಿದ್ದು. ಇವರಿಗೆ ಪ್ರತಿದಿನ ಎಲ್ಲಾ ರೀತಿಯ ಐ ರಿಪೀಟ್ ಎಲ್ಲಾ ರೀತಿಯ ಸೇವೆಗಳು ಸಿಗುತ್ತಿದ್ದವು. ಇಷ್ಟೆಲ್ಲ ಇರಬೇಕಾದರೆ ದರ್ಶನ್ ಎಂಬ ನಟ ನನಗೆ ಅಬ್ಬೂ ಆಗಿದೆ, ಬೆನ್ನು ನೋವು, ಸೊಂಟ ನೋವು ಎಂದರೆ ಅದನ್ನ ನಂಬೇಕಾ? ಬುಲ್ಶಿಟ್.
ಹಾಗಾದರೇ ಜೈಲು ದುಡ್ಡಿರುವವರಿಗೆ ಮಾತ್ರವಾ!? ದುಡ್ಡಿಲದವರೇನೂ ಮಾಡ್ತಾರೆ ಅಂಥ ತಿಳಿದರೇ ನೀವು ಬೆಚ್ಚಿ ಬೀಳೋದಕ್ಕಿಂತ ಈ ವ್ಯವಸ್ಥೆಯ ಬಗ್ಗೆ ಅಸಹ್ಯ ಪಟ್ಟುಕೊಳ್ತೀರ. ಅದನ್ನ ಸೊಡೋಮೈಜ್ ಸಡೋಮೈಜೆಷನ್ ಅಂತಾರೆ. ಇದರರ್ಥ ಸಲಿಂಗ ಕಾಮ ಅಂತಲ್ಲ. ಮುಖ ಮೈಥನ ಅಂತ. ಪುಟ್ಟಪರ್ತಿಯ ಕರಡಿ ಬಾಬನೆಂಬೋ ಸಾಯಿಬಾಬನಿಗೆ ಈ ಖಯಾಲಿ ಇತ್ತು. ತನ್ನ ನೈಟಿಯಂತಹ ಉದ್ದ ನಿಲುವಂಗಿಯೊಳಗೆ ಸಣ್ಣ ವಯಸ್ಸಿನ ಯುವಕರನ್ನು ಬಿಟ್ಟುಕೊಂಡು ಖುಷಿಯಿಂದ ಮುಲುಗುತ್ತಿದ್ದ. ಆ ಮುಲುಗಾಟ ಇಡೀ ಪುಟ್ಟಪರ್ತಿಗೆ ಕೇಳುತ್ತಿತ್ತು.
ಇಂತ ಜೈಲಿನಲ್ಲಿ ಹಣ ಬರುವುದೇ ಮತ್ತೊಂದು ಕತೆ. ಖೈದಿಯ ಕಡೆಯವನೊಬ್ಬ ಜೈಲಿಗೆ ಸ್ಪೆಷಲ್ ಎಂಟ್ರಿ ಹಾಕಿಸಿಕೊಂಡು ಬರುತ್ತಾನೆ. ಹಾಗೆ ಬರುವವನು ಅಷ್ಟು ಸಲೀಸಾಗಿ ಹಣ ತರಲು ಸಾಧ್ಯವಿಲ್ಲ. ಅದಕ್ಕಾಗಿ ಕಾಕಿಯೊಬ್ಬ ಅಧಿಕಾರಿಯ ಅಪ್ಪಣೆ ಮೇರೆಗೆ ಹೊರಗೆ ಹೋಗಿ ಅದನ್ನು ತರುತ್ತಾನೆ. ಎಂದಿನAತೆ ಇದರಲ್ಲೂ ಅರ್ಧಕರ್ಧ ಮಾಯಾ! ಅದು ಯಾರ ಕೈವಾಡ? ಎಂಬ ಪ್ರಶ್ನೆಗೆ ಉತ್ತರ ನಿಮ್ಮಲ್ಲೆ ಕಂಡುಕೊಳ್ಳ ಬೇಕು.
ಈ ಜೈಲಿನೊಳಗೆ ಇರುವ ಅಷ್ಟೂ ಕ್ರಿಮಿನಲ್ಗಳು ಸೈಕೋಗಳನ್ನೆಲ್ಲ ಮಿಕ್ಸಿಗೆ ಹಾಕಿ ಚೆನ್ನಾಗಿ ರುಬ್ಬಿ ತೆಗೆದರೆ ಹೊರಬರುವುದೇ ಕೃಷ್ಣಕುಮಾರ್ ಎಂಬ ವ್ಯಕ್ತಿ. ತಮಿಳುನಾಡಿನ ‘ಚಿನ್ನಮ್ಮ’ ಶಶಿಕಲಾ ಇಲ್ಲಿ ವಿಶ್ರಾಂತಿ ತೆಗೆದುಕೊಳ್ಳಲು ಬಂದಾಗ ಇದೇ ಕೃಷ್ಣಕುಮಾರ್ ಇಲ್ಲಿ ಜೈಲರ್ ಆಗಿದ್ದ. ಶಶಿಕಲಾ ನನಗಿಂತದ್ದೂ ಬೇಕು ಎಂದು ಕಣ್ಸನ್ನೆ ಮಾಡಿದರೇ ಸಾಕು ಖುದ್ದು ಕೃಷ್ಣಕುಮಾರೇ ಆ ವಸ್ತು ತಂದು ಕೊಡುತ್ತಿದ್ದರು. ನಿವೃತ್ತನಾಗುವ ವೇಳೆಗೆ ಈತನ ಆಸ್ತಿ ಚಿನ್ನಮನ ದಯೆಯಿಂದ ಮೂರುಪಟ್ಟು ಹೆಚ್ಚಾಗಿದ್ದಂತೂ ನಿಜ.
ಇರಲಿ ಸಾವಿರಾರು ಜನ ಕ್ರಿಮಿನಲ್ಗಳನ್ನ ರೊಚ್ಚಿಗೇಳದಂತೆ ಕಂಟ್ರೋಲ್ನಲ್ಲಿಟ್ಟುಕೊಳ್ಳ ಬೇಕು ಅಂದರೆ ಕೆಲ ನಿಯಮಗಳನ್ನ ಸಣ್ಣದಾಗಿ ಮೀರಬೇಕಾಗುತ್ತದೆ. ಆದರೆ ಅಧಿಕಾರ ದಾಹಕ್ಕಾಗಿ ಕೆಲ ಪ್ರಾಮಾಣಿಕ ಅಧಿಕಾರಿಗಳ ತಲೆದಂಡ ಮಾಡ್ತಾರಲ್ಲ ಅದು ಅಕ್ಷಮ್ಯ.



