ಮದುವೆಯ ಸಂಭ್ರಮವೇ ಶೋಕವಾಗಿ ಬದಲಾಯಿತು; ವಾರವೂ ತುಂಬುವ ಮುನ್ನ ನವ ವರ-ತಂದೆ ಕರೆಂಟ್ ಶಾಕ್‌ಗೆ ಬ*ಲಿ!

ತೆಲಂಗಾಣದ ಹನುಮಕೊಂಡ ಜಿಲ್ಲೆಯಲ್ಲಿ ಮದುವೆಯ ಸಂಭ್ರಮ ದುರಂತವಾಗಿ ಮಾರ್ಪಟ್ಟಿದೆ. ಮದುವೆಯಾಗಿ ಕೇವಲ ಒಂದು ವಾರವೂ ಕಳೆದಿರದ ನವ ವರ ಶರತ್ ಕುಮಾರ್ ಹಾಗೂ ಅವರ ತಂದೆ ಸಾಂಬಯ್ಯ ವಿದ್ಯುತ್ ಶಾಕ್‌ಗೆ ಒಳಗಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮದುವೆ ಸಮಾರಂಭಕ್ಕಾಗಿ ಮನೆಯ ಮುಂಭಾಗದಲ್ಲಿ ಅಳವಡಿಸಿದ್ದ ವಿದ್ಯುತ್ ದೀಪಾಲಂಕಾರದ ತಂತಿಗಳನ್ನು ತೆರವುಗೊಳಿಸುವ ವೇಳೆ ಈ ದುರಂತ ಸಂಭವಿಸಿದೆ. ಮೊದಲಿಗೆ ಸಾಂಬಯ್ಯ ಅವರಿಗೆ ಕರೆಂಟ್ ಶಾಕ್ ತಗುಲಿದ್ದು, ಅವರನ್ನು ರಕ್ಷಿಸಲು ಮುಂದಾದ ಪುತ್ರ ಶರತ್ ಕುಮಾರ್ ಕೂಡ ವಿದ್ಯುತ್ ಪ್ರವಾಹಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ.
ಶರತ್ ಕುಮಾರ್ ಹೈದರಾಬಾದ್‌ನಲ್ಲಿ ಚಾರ್ಟರ್ಡ್ ಅಕೌಂಟೆಂಟ್ (CA) ಆಗಿ ಕೆಲಸ ಮಾಡುತ್ತಿದ್ದರು. ಜೂನ್ 24ರಂದು ಅವರ ವಿವಾಹ ಅದ್ಧೂರಿಯಾಗಿ ನಡೆದಿತ್ತು. ಆದರೆ ಮದುವೆಯ ಸಂಭ್ರಮ ಇನ್ನೂ ಮನೆಮಾಡಿದ್ದ ಸಂದರ್ಭದಲ್ಲೇ ಸಂಭವಿಸಿದ ಈ ದುರಂತ ಕುಟುಂಬವನ್ನು ಶೋಕಸಾಗರಕ್ಕೆ ತಳ್ಳಿದೆ.
ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಆರಂಭಿಕ ಮಾಹಿತಿಯ ಪ್ರಕಾರ, ಮಳೆ ಹಾಗೂ ವಿದ್ಯುತ್ ತಂತಿಗಳಲ್ಲಿನ ಸೋರಿಕೆ ಈ ಅವಘಡಕ್ಕೆ ಕಾರಣವಾಗಿರಬಹುದೆಂದು ಶಂಕಿಸಲಾಗಿದೆ.



